ಬುಧವಾರ, ಜನವರಿ 26, 2022
25 °C

ಗಾಬಾದಲ್ಲಿ ಆ್ಯಷಸ್ ಟ್ರೋಫಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಬೇನ್(ಎಎಫ್‌ಪಿ): ಗಾಬಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ನಡೆಯುವ ಈ ಸರಣಿಯ ಮೊದಲ ಪಂದ್ಯವು ಬುಧವಾರ ಇಲ್ಲಿ ಆರಂಭವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ‘ಹೋದ ವರ್ಷ ಇಲ್ಲಿ ಭಾರತ ತಂಡವು ಟೆಸ್ಟ್ ಗೆದ್ದಿತ್ತು. ಭಾರತದ ಆಟಗಾರರು ಅಮೋಘವಾಗಿ ಆಡಿದ್ದರು. ಆ ಗೆಲುವು ಎಲ್ಲ ಪ್ರವಾಸಿ ತಂಡಗಳಿಗೂ ಸ್ಫೂರ್ತಿದಾಯಕವಾಗಿದೆ‘ ಎಂದರು.

ಆಸ್ಟ್ರೇಲಿಯಾ ತಂಡದ ನೂತನ ನಾಯಕ ಪ್ಯಾಟ್ ಕಮಿನ್ಸ್‌ ಮತ್ತು ರೂಟ್ ಅವರು ಆ್ಯಷಸ್ ಟ್ರೋಫಿ ಪ್ರದರ್ಶಿಸಿದರು.

ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ 2011ರಲ್ಲಿ ಆ್ಯಷಸ್ ಗೆದ್ದಿತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು