ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಪತ್ನಿಗೆ ಕಳಂಕ ಹಚ್ಚಬೇಡಿ: ತಂದೆ ವಿರುದ್ಧ ಸಿಡಿದ ರವೀಂದ್ರ ಜಡೇಜ

Published 9 ಫೆಬ್ರುವರಿ 2024, 17:12 IST
Last Updated 9 ಫೆಬ್ರುವರಿ 2024, 17:12 IST
ಅಕ್ಷರ ಗಾತ್ರ

ನವದೆಹಲಿ: ಸಂದರ್ಶನದಲ್ಲಿ ತಮ್ಮ ಪತ್ನಿ, ಗುಜರಾತ್‌ನ ಜಾಮ್‌ನಗರದ ಬಿಜೆಪಿ ಶಾಸಕಿ ರಿವಾಬಾ ವಿರುದ್ಧ ತಂದೆ ಅನಿರುದ್ಧ ಸಿನ್ಹಾ ಜಡೇಜ ಮಾಡಿರುವ ಆರೋಪಗಳ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರ ರವೀಂದ್ರ ಜಡೇಜ ಕಿಡಿಕಾರಿದ್ದಾರೆ.

2016ರ ಏಪ್ರಿಲ್‌ನಲ್ಲಿ ರಿವಾಬಾಳನ್ನು ಮದುವೆಯಾದ ಬಳಿಕ ನನ್ನ ಮಗನಿಗೆ ಸಮಸ್ಯೆಗಳು ಪ್ರಾರಂಭವಾದವು.‘ನಿಮಗೆ ನಾನು ಒಂದು ಸತ್ಯವನ್ನು ಹೇಳಲು ಬಯಸುತ್ತೇನೆ. ಅದೇನೆಂದರೆ, ನನಗೂ ಮತ್ತು ಜಡೇಜ ಹಾಗೂ ಆತನ ಪತ್ನಿ ರಿವಾಬಾ ನಡುವೆ ಯಾವುದೇ ಸಂಬಂಧ ಉಳಿದಿಲ್ಲ’ ಎಂದು ಗುಜರಾತ್‌ನ ದಿನಪತ್ರಿಕೆ ದಿವ್ಯ ಭಾಸ್ಕರ್‌ಗೆ ನೀಡಿರುವ ಸಂದರ್ಶನದಲ್ಲಿ ಜಡೇಜ ತಂದೆ ಅನಿರುದ್ಧ ಸಿನ್ಹಾ ಹೇಳಿದ್ದರು.

ತಮ್ಮ ತಂದೆ ಆರೋಪಗಳಿಗೆ ಪ್ರತಿಕ್ರಿಯಿಸಿರುವ ರವೀಂದ್ರ ಜಡೇಜ, ಪೂರ್ವಯೋಜಿತ ಸಂದರ್ಶನವನ್ನು ನಂಬಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

‘ಪೂರ್ವ ಯೋಜಿತ ಸಂದರ್ಶನದಲ್ಲಿ ಅವರು ಹೇಳಿರುವ ವಿಷಯಗಳನ್ನು ನಿರ್ಲಕ್ಷಿಸಿ’ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅಲ್ಲದೆ, ನನ್ನ ಪತ್ನಿ ಘನತೆಗೆ ಕಳಂಕ ಹಚ್ಚಬೇಡಿ ಎಂದು ಜಡೇಜ ತನ್ನ ತಂದೆಗೆ ಮನವಿ ಮಾಡಿಕೊಂಡಿದ್ದಾರೆ.

'ದಿವ್ಯ ಭಾಸ್ಕರ್ ಸಂದರ್ಶನದಲ್ಲಿ ಮ್ಮ ತಂದೆ ಉಲ್ಲೇಖಿಸಿರುವ ವಿಷಯಗಳು ಅರ್ಥಹೀನ ಮತ್ತು ಸುಳ್ಳು. ಅವು ಏಕಪಕ್ಷೀಯ ಹೇಳಿಕೆಗಳು. ನಾನು ಅವುಗಳನ್ನು ನಿರಾಕರಿಸುತ್ತೇನೆ. ನನ್ನ ಪತ್ನಿಯ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನ ಅನುಚಿತ ಮತ್ತು ಖಂಡನೀಯ. ನನಗೂ ಹೇಳಲು ಬಹಳಷ್ಟಿದೆ. ಆದರೆ, ಆ ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿರುವುದು ಉತ್ತಮ’ ಎಂದು ಗುಜರಾತಿ ಭಾಷೆಯಲ್ಲಿ ಬರೆದಿರುವ ಟಿಪ್ಪಣಿಯಲ್ಲಿ ಜಡೇಜ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT