IND vs AUS Test: ಭಾರತ 244ಕ್ಕೆ ಆಲೌಟ್; ವಿರಾಮಕ್ಕೆ ಆಸೀಸ್ 35/2

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಅಡಿಲೇಡ್ ಓವಲ್ ಮೈದಾನಲ್ಲಿ ಸಾಗುತ್ತಿರುವ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾ, ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ (74) ಹೊರತಾಗಿಯೂ 93.1 ಓವರ್‌ಗಳಲ್ಲಿ 244 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಭಾರತದ 244 ರನ್‌ಗಳಿಗೆ ಉತ್ತರ ನೀಡುತ್ತಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ ಡಿನ್ನರ್ ಬ್ರೇಕ್ ವೇಳೆಗೆ 35 ರನ್ನಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಎರಡು ವಿಕೆಟ್‌ಗಳನ್ನು ಕಬಳಿಸಿದ ಜಸ್‌ಪ್ರೀತ್ ಬೂಮ್ರಾ, ಡಬಲ್ ಆಘಾತ ನೀಡಿದರು. ಆರಂಭಿಕರಾದ ಮ್ಯಾಥ್ಯೂ ವೇಡ್ ಹಾಗೂ ಜೋ ಬರ್ನ್ಸ್ ತಲಾ ಎಂಟು ರನ್ ಗಳಿಸಿ ಬೂಮ್ರಾ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು.
ಈಗ ಕ್ರೀಸಿನಲ್ಲಿರುವ ಮಾರ್ನಸ್ ಲಾಬುಷೇನ್ (16*) ಹಾಗೂ ಸ್ಟೀವನ್ ಸ್ಮಿತ್ (1*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
BOOM BOOM 💥
Bumrah strikes again! Burns departs for 8.
Live - https://t.co/dBLRRBSJrx #AUSvIND pic.twitter.com/2mNdgq8i6e
— BCCI (@BCCI) December 18, 2020
ಇದನ್ನೂ ಓದಿ: ಟೆಸ್ಟ್ನಲ್ಲಿ ವಿರಾಟ್ 2 ಬಾರಿ ರನೌಟ್; ಇಲ್ಲಿದೆ ಕುತೂಹಲಕಾರಿ ಅಂಶ!
ಭಾರತ 244ಕ್ಕೆ ಆಲೌಟ್...
ಈ ಮೊದಲು 233/6 ಎಂಬಲ್ಲಿದ್ದ ಎರಡನೇ ದಿನದಾಟ ಮುಂದುವರಿಸಿದ ಭಾರತ ತಂಡವು, 23 ನಿಮಿಷದೊಳಗೆ ಮತ್ತಷ್ಟು 11 ರನ್ ಪೇರಿಸುವುದರೊಳಗೆ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟ್ ಆಯಿತು.
25 ಎಸೆತಗಳಲ್ಲೇ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಆಸೀಸ್ ವೇಗಿಗಳು ಕಬಳಿಸಿದರು. ವೃದ್ಧಿಮಾನ್ ಸಹಾ (9), ರವಿಚಂದ್ರನ್ ಅಶ್ವಿನ್ (15), ಉಮೇಶ್ ಯಾದವ್ (6) ಹಾಗೂ ಮೊಹಮ್ಮದ್ ಶಮಿ (0) ನಿರಾಸೆ ಮೂಡಿಸಿದರು. ಇನ್ನುಳಿದಂತೆ ಜಸ್‌ಪ್ರೀತ್ ಬುಮ್ರಾ (4*) ರನ್ ಗಳಿಸಿದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ ನಾಲ್ಕು (53/4) ಮತ್ತು ಪ್ಯಾಟ್ ಕಮಿನ್ಸ್ ಮೂರು ವಿಕೆಟ್ (48/3) ಕಿತ್ತು ಮಿಂಚಿದರು.
Tea time in Adelaide with Australia 2-35 after 19 overs #AUSvIND
SCORECARD: https://t.co/LGCJ7zSdrY pic.twitter.com/2wh20flI1l
— cricket.com.au (@cricketcomau) December 18, 2020
ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಆದರೆ ರನೌಟ್ ಆಗಿರುವುದು ದೊಡ್ಡ ಮೊತ್ತ ಪೇರಿಸುವ ಭಾರತದ ಇರಾದೆಗೆ ಹಿನ್ನಡೆಯಾಯಿತು. 180 ಎಸೆತಗಳನ್ನು ಎದುರಿಸಿದ ವಿರಾಟ್ ಎಂಟು ಬೌಂಡರಿಗಳಿಂದ 74 ರನ್ ಗಳಿಸಿದರು.
ಇದನ್ನೂ ಓದಿ: ಎಂಎಕೆ ಪಟೌಡಿ 51 ವರ್ಷ ಹಳೆಯ ನಾಯಕತ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ಚೇತೇಶ್ವರ ಪೂಜಾರ (43) ಹಾಗೂ ಅಜಿಂಕ್ಯ ರಹಾನೆ (42) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗಲಿಲ್ಲ. ಪೃಥ್ವಿ ಶಾ (0), ಮಯಂಕ್ ಅಗರವಾಲ್ (17), ಹನುಮ ವಿಹಾರಿ (16) ರನ್ ಗಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.