ಮೆಲ್ಬರ್ನ್: ಇಂಗ್ಲೆಂಡ್ನಲ್ಲಿ ತಯಾರಾಗುವ ಡ್ಯೂಕ್ಸ್ ಚೆಂಡುಗಳನ್ನು ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಬಳಸದಿರಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಧರಿಸಿದೆ.

ಡ್ಯೂಕ್ಸ್ ಬದಲು ಸ್ವದೇಶದಲ್ಲೇ ತಯಾರಿಸುವ ಕೂಕಬುರಾ ಚೆಂಡುಗಳನ್ನುಬಳಕೆ ಮಾಡುವುದಾಗಿ ಗುರುವಾರ ಹೇಳಿದೆ. ಇದು ಮುಂದಿನ ಋತುವಿನ ಶೆಫೀಲ್ಡ್ ಶೀಲ್ಡ್ ಟೂರ್ನಿಯಿಂದಲೇ ಜಾರಿಯಾಗಲಿದೆ.

2019ರ ಆ್ಯಷಸ್ ಟೆಸ್ಟ್ ಸರಣಿಯ ಮೇಲೆ ಕಣ್ಣಿಟ್ಟಿದ್ದ ಸಿಎ, ತನ್ನ ಆಟಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 2016–17ರ ಋತುವಿನ ಶೆಫೀಲ್ಡ್ ಶೀಲ್ಡ್ ಟೂರ್ನಿಯಿಂದ ಡ್ಯೂಕ್ಸ್ ಚೆಂಡುಗಳ ಬಳಕೆಗೆ ‘ಹಸಿರು ನಿಶಾನೆ’ ತೋರಿತ್ತು.

‘ಇಂಗ್ಲೆಂಡ್ನಲ್ಲಿ ಡ್ಯೂಕ್ಸ್ ಚೆಂಡುಗಳು ಬಳಕೆಯಲ್ಲಿವೆ. ಆ ದೇಶದಲ್ಲಿ ನಿಗದಿಯಾಗಿದ್ದ ಆ್ಯಷಸ್ ಸರಣಿಯಲ್ಲಿ ಯಶಸ್ಸು ಪಡೆಯುವುದು ನಮ್ಮ ಗುರಿಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆ ಚೆಂಡುಗಳನ್ನು ಬಳಕೆಗೆ ತಂದಿದ್ದೆವು. ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ. ಹೀಗಾಗಿ ಡ್ಯೂಕ್ಸ್ ಚೆಂಡುಗಳ ಬಳಕೆಯನ್ನು ಕೈಬಿಡಲು ಮುಂದಾಗಿದ್ದೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಮುಖ್ಯಸ್ಥ ಪೀಟರ್ ರೋಚ್, ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಡ್ಯೂಕ್ಸ್ ಚೆಂಡುಗಳನ್ನು ಬಳಸಲು ಶುರುಮಾಡಿದ ನಂತರ ಶೆಫೀಲ್ಡ್ ಶೀಲ್ಡ್ನಲ್ಲಿ ನಮ್ಮ ಸ್ಪಿನ್ನರ್ಗಳು ಯಶಸ್ಸು ಕಾಣುತ್ತಿಲ್ಲ. ಸ್ಪಿನ್ನರ್ಗಳ ಹಿತ ಕಾಯುವುದು ನಮ್ಮ ಕರ್ತವ್ಯ. ನಮ್ಮ ನಿರ್ಧಾರಕ್ಕೆ ಇದು ಕೂಡ ಮುಖ್ಯ ಕಾರಣ’ ಎಂದೂ ಅವರು ಹೇಳಿದ್ದಾರೆ.

ಸಿಎ ನಿರ್ಧಾರಕ್ಕೆ ಡ್ಯೂಕ್ಸ್ ಕ್ರಿಕೆಟ್ ಕಂಪನಿಯ ಮಾಲೀಕ ದಿಲೀಪ್ ಜಜೋಡಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.