ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಅಭ್ಯಾಸ ಪಂದ್ಯ: ಉಸ್ಮಾನ್‌ ದವಡೆಗೆ ಬಡಿದ ಚೆಂಡು

ಅಪಾಯದಿಂದ ಪಾರಾದ ಆಸ್ಟ್ರೇಲಿಯಾದ ಆಟಗಾರ
Last Updated 23 ಮೇ 2019, 13:57 IST
ಅಕ್ಷರ ಗಾತ್ರ

ಲಂಡನ್‌: ವೆಸ್ಟ್‌ ಇಂಡೀಸ್‌ ಎದುರಿನ ವಿಶ್ವಕಪ್‌ ಅನಧಿಕೃತ ಅಭ್ಯಾಸ ಪಂದ್ಯದ ವೇಳೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖ್ವಾಜಾ ಅವರ ದವಡೆಗೆ ಚೆಂಡು ಬಡಿದಿದ್ದು ಅಪಾಯದಿಂದ ಪಾರಾಗಿದ್ದಾರೆ.

ಸೌಥಾಂಪ್ಟನ್‌ನ ನರ್ಸರಿ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಹಣಾಹಣಿಯಲ್ಲಿ ವಿಂಡೀಸ್‌ ತಂಡದ ಆ್ಯಂಡ್ರೆ ರಸೆಲ್‌ ಎಸೆದ ಚೆಂಡು ಖ್ವಾಜಾ (5ರನ್‌) ಅವರ ದವಡೆಗೆ ಬಡಿಯಿತು. ತಕ್ಷಣವೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್‌ ರೇ ತೆಗೆಸಲಾಯಿತು.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಂದ ಗೆದ್ದಿತು. 230ರನ್‌ಗಳ ಗುರಿಯನ್ನು ಈ ತಂಡವು ಮೂರು ವಿಕೆಟ್‌ ಕಳೆದುಕೊಂಡು ಮುಟ್ಟಿತು. ಸ್ಟೀವ್ ಸ್ಮಿತ್‌ 76ರನ್ ಗಳಿಸಿ ಗಮನ ಸೆಳೆದರು. ಡೇವಿಡ್‌ ವಾರ್ನರ್‌ 12ರನ್‌ ಕಲೆಹಾಕಿದರು. ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿದ್ದ ಇವರು ನಿಷೇಧ ಶಿಕ್ಷೆ ಪೂರೈಸಿದ ಬಳಿಕ ಮೊದಲ ಸಲ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ಶಾನ್‌ ಮಾರ್ಷ್‌ ಕೂಡಾ ಅಜೇಯ ಅರ್ಧಶತಕ ದಾಖಲಿಸಿದರು. ಮಾರ್ಷ್‌ ಮತ್ತು ಸ್ಮಿತ್‌ ಮೂರನೇ ವಿಕೆಟ್‌ಗೆ 109ರನ್‌ಗಳ ಜೊತೆಯಾಟ ಆಡಿದರು.

ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ತಂಡದ ಎವಿನ್‌ ಲೂಯಿಸ್‌ ಮತ್ತು ಕಾರ್ಲೊಸ್‌ ಬ್ರಾಥ್‌ವೇಟ್‌ ಅವರು ಅರ್ಧಶತಕ ದಾಖಲಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಜೂನ್‌ 1ರಂದು ಬ್ರಿಸ್ಟಾಲ್‌ನಲ್ಲಿ ನಡೆಯುವ ತನ್ನ ಮೊದಲ ಹೋರಾಟದಲ್ಲಿ ಅಫ್ಗಾನಿಸ್ತಾನ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT