ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಟೆಸ್ಟ್: ಆಸ್ಟ್ರೇಲಿಯಾ ಮೇಲುಗೈ

ಕೊನೆಯ ವಿಕೆಟ್‌ಗೆ ಗ್ರೀನ್‌–ಜೋಶ್ ಶತಕದ ಜೊತೆಯಾಟ
Published 1 ಮಾರ್ಚ್ 2024, 13:44 IST
Last Updated 1 ಮಾರ್ಚ್ 2024, 13:44 IST
ಅಕ್ಷರ ಗಾತ್ರ

ವೆಲಿಂಗ್ಟನ್‌: ನ್ಯೂಜಿಲೆಂಡ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ 179 ರನ್‌ಗಳಿಗೆ ಕುಸಿದ ಪರಿಣಾಮ ಆಸ್ಟ್ರೇಲಿಯಾ ತಂಡ ಮೊದಲ ಕ್ರಿಕೆಟ್‌ ಟೆಸ್ಟ್‌ನ ಎರಡನೇ ದಿನವೇ ಮೇಲುಗೈ ಸಾಧಿಸಿತು. ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ 217 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಪ್ರವಾಸಿ ತಂಡ ಶುಕ್ರವಾರ ದಿನದಾಟದ ಕೊನೆಗೆ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 13 ರನ್‌ ಗಳಿಸಿದೆ.

ನ್ಯೂಜಿಲೆಂಡ್‌ ನಾಯಕ ಟಿಮ್‌ ಸೌಥಿ ಅವರು ಎರಡೂ ವಿಕೆಟ್‌ (ಸ್ಟೀವ್‌ ಸ್ಮಿತ್‌, ಮಾರ್ನಸ್‌ ಲಾಬುಷೇನ್) ಪಡೆದರು. ಆದರೆ ಮ್ಯಾಟ್‌ ಹೆನ್ರಿ ಬೌಲಿಂಗ್‌ನಲ್ಲಿ ನೈಟ್‌ ವಾಚ್‌ಮನ್‌ ನೇಥನ್ ಲಯನ್ ಅವರಿಗೆ ಸ್ಲಿಪ್‌ನಲ್ಲಿ ಜೀವದಾನವನ್ನೂ ನೀಡಿದರು.

ಇದಕ್ಕೆ ಮೊದಲು ಕ್ಯಾಮರಾನ್ ಗ್ರೀನ್ ಅವರು ಅಜೇಯ 174 ರನ್ (275 ಎಸೆತ, 4x23, 6x5) ಗಳಿಸಿದ್ದರಿಂದ ಆಸ್ಟ್ರೇಲಿಯಾ ಮೊತ್ತ ಬಹಳಷ್ಟು ಉಬ್ಬಿತು. ಇದು 24 ವರ್ಷದ ಗ್ರೀನ್‌ ಅವರಿಗೆ ಎರಡನೇ ಟೆಸ್ಟ್‌ ಶತಕ. 9 ವಿಕೆಟ್‌ಗೆ 269 ರನ್‌ಗಳೊಡನೆ ಆಟ ಮುಂದುವರಿಸಿದ ಆಸ್ಟ್ರೇಲಿಯಾ ಮೊತ್ತವನ್ನು ಗ್ರೀನ್ ಮತ್ತು ಜೋಶ್‌ ಹ್ಯಾಜಲ್‌ವುಡ್‌ (22) ನಿರೀಕ್ಷೆಗೆ ಮೀರಿ ಬೆಳೆಸಿದರು. ಕೊನೆಯ ವಿಕೆಟ್‌ಗೆ 116 ರನ್‌ಗಳು ಬಂದವು.

ನ್ಯೂಜಿಲೆಂಡ್‌ ಮೊತ್ತ 12 ಆಗುವಷ್ಟರಲ್ಲಿ ಟಾಮ್ ಲೇಥಮ್ (5), ಕೇನ್‌ ವಿಲಿಯಮ್ಸನ್ (0) ಮತ್ತು ರಚಿನ್ ರವೀಂದ್ರ (0) ಪೆವಿಲಿಯನ್‌ಗೆ ಮರಳಿದರು. ಗ್ಲೆನ್‌ ಫಿಲಿಪ್ಸ್‌ (71, 70ಎ, 4x13) ಕೊಂಚ ಪ್ರತಿರೋಧ ತೋರಿದರು. ತಂಡ 29 ರನ್ನಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಅವರು ಟಾಮ್‌ ಬ್ಲಂಡೆಲ್ (33) ಜೊತೆ ಆರನೇ ವಿಕೆಟ್‌ಗೆ 84 ರನ್ ಸೇರಿಸಿದ್ದರಿಂದ ತಂಡ ಸ್ವಲ್ಪ ಚೇತರಿಸಿತು.

ಸ್ಕೋರುಗಳು:

ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 383 ಮತ್ತು 8 (ಕ್ಯಾಮರಾನ್‌ ಗ್ರೀನ್‌ ಔಟಾಗದೇ 174, ಹ್ಯಾಜಲ್‌ವುಡ್ 22, ಮ್ಯಾಟ್‌ ಹೆನ್ರಿ 70ಕ್ಕೆ5); ನ್ಯೂಜಿಲೆಂಡ್‌: 43.1 ಓವರುಗಳಲ್ಲಿ 179 (ಟಾಮ್‌ ಬ್ಲಂಡೆಲ್‌ 33, ಗ್ಲೆನ್‌ ಫಿಲಿಪ್ಸ್‌ 71, ಹ್ಯಾಜಲ್‌ವುಡ್‌ 55ಕ್ಕ2, ನೇಥನ್ ಲಯನ್‌ 43ಕ್ಕೆ4). ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: ಓವರುಗಳಲ್ಲಿ 2 ವಿಕೆಟ್‌ಗೆ 13 (ಟಿಮ್‌ ಸೌಥಿ 5ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT