ಸೋಮವಾರ, ಮಾರ್ಚ್ 1, 2021
31 °C
ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿ: ಭಾರತ ಉತ್ತಮ ಬೌಲಿಂಗ್‌

ಇನಿಂಗ್ಸ್‌ ಮುನ್ನಡೆಯುವ ಆಸಿಸ್ ಆಸೆಗೆ ಟ್ರಾವಿಸ್ ಹೆಡ್ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್‌: ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಸಾಧಿಸಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾರಿ ಪೈಪೋಟಿ ನಡೆಸಿವೆ.

ವಿರಾಟ್‌ ಕೊಹ್ಲಿ ಪಡೆ ಮೊದಲ ಇನಿಂಗ್ಸ್‌ನಲ್ಲಿ ಕಲೆಹಾಕಿದ್ದ ಸಾಧಾರಣ ಮೊತ್ತ ದಾಟಿ, ಇನಿಂಗ್ಸ್‌ ಮುನ್ನಡೆ ಸಾಧಿಸುವ ಆತಿಥೇಯರ ಆಸೆಗೆ ಭಾರತದ ಬೌಲರ್‌ಗಳು ತೊಡಕಾದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 9 ವಿಕೆಟ್‌ ಕಳೆದುಕೊಂಡು 250 ರನ್‌ಗಳಿಸಿತ್ತು. ಶುಕ್ರವಾರ ಜಸ್‌ಪ್ರೀತ್‌ ಬೂಮ್ರಾ ಜೊತೆ ಆಟ ಮುಂದುವರಿಸಿದ ಶಮಿ ಎರಡನೇ ದಿನದಾಟದ ಮೊದಲ ಎಸೆತದಲ್ಲೆ ವಿಕೆಟ್‌ ಒಪ್ಪಿಸಿದರು.

ಬಳಿಕ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್‌ ಪಿಂಚ್‌ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ ಹೊರತುಪಡಿಸಿ ಉಳಿದ ಆಟಗಾರರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. 149 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿ ಸಹಿತ 61 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ವೇಗಿ ಮಿಚೇಲ್‌ ಸ್ಟಾರ್ಕ್‌(08), ಟ್ರಾವಿಸ್‌ ಜೊತೆ ಶನಿವಾರಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಭಾರತ ಪರ ಉತ್ತಮವಾಗಿ ದಾಳಿ ಸಂಘಟಿಸಿದ ಇಶಾಂತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ ತಲಾ ಎರಡು ವಿಕೆಟ್‌ ಉರುಳಿಸಿದರೆ, ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಮೂರು ವಿಕೆಟ್‌ ಕಬಳಿಸಿ ಆತಿಥೇಯರಿಗೆ ಆಘಾತ ನೀಡಿದರು.

ಸದ್ಯ ಎರಡನೇ ದಿನದಾಟದ ಅಂತ್ಯಕ್ಕೆ ಟಿಮ್‌ ಪೈನೆ ಬಳಗ ಏಳು ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿದೆ. ಇನಿಂಗ್ಸ್‌ ಮುನ್ನಡೆ ಸಾಧಿಸಲು ಆಸಿಸ್‌ ತಂಡ ಇನ್ನೂ 59 ರನ್‌ ಗಳಿಸಬೇಕಿದೆ. ಮೂರು ವಿಕೆಟ್‌ ಪಡೆಯುವ ಒತ್ತಡ ವಿರಾಟ್‌ ಬಳಗದ ಮೇಲೂ ಇದೆ.

ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್‌: 88 ಓವರ್‌ಗಳಲ್ಲಿ 250ರನ್‌ಗೆ ಆಲೌಟ್‌

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌: 88 ಓವರ್‌ಗಳಲ್ಲಿ 7 ವಿಕೆಟ್‌ಗೆ 191ರನ್‌

ಬ್ಯಾಟಿಂಗ್‌: ಮಾರ್ಕಸ್‌ ಹ್ಯಾರಿಸ್‌ 26, ಉಸ್ಮಾನ್‌ ಖವಾಜ 28, ಶಾನ್‌ ಮಾರ್ಷ್‌ 02, ಪೀಟರ್‌ ಹ್ಯಾಂಡ್ಸ್‌ಕಂಬ್‌ 34, ಟ್ರಾವಿಸ್‌ ಹೆಡ್‌ 61 (ಅಜೇಯ), ಟಿಮ್‌ ಪೇನ್‌ 05, ಪ್ಯಾಟ್‌ ಕಮಿನ್ಸ್‌ 10, ಮಿಚೇಲ್‌ ಸ್ಟಾರ್ಕ್‌ 8 (ಅಜೇಯ)

ಬೌಲಿಂಗ್‌: ಇಶಾಂತ್‌ ಶರ್ಮಾ 31ಕ್ಕೆ 2, ಜಸ್‌ಪ್ರೀತ್‌ ಬೂಮ್ರಾ 34ಕ್ಕೆ 2, ರವಿಚಂದ್ರನ್‌ ಅಶ್ವಿನ್‌ 50ಕ್ಕೆ 3

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು