ಬಾರ್ಡರ್‌–ಗವಾಸ್ಕರ್‌ ಸರಣಿ: ಮೊದಲ ಪಂದ್ಯದ ಮೇಲೆ ಭಾರತ ಹಿಡಿತ, ಆತಂಕದಲ್ಲಿ ಆಸಿಸ್‌

7

ಬಾರ್ಡರ್‌–ಗವಾಸ್ಕರ್‌ ಸರಣಿ: ಮೊದಲ ಪಂದ್ಯದ ಮೇಲೆ ಭಾರತ ಹಿಡಿತ, ಆತಂಕದಲ್ಲಿ ಆಸಿಸ್‌

Published:
Updated:

ಅಡಿಲೇಡ್‌: ಭಾರತ ನೀಡಿದ 323ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪಂದ್ಯ ಮುಕ್ತಾಯಕ್ಕೆ ಇನ್ನೊಂದು ದಿನದ ಆಟ ಬಾಕಿ ಇದ್ದು, ವಿರಾಟ್‌ ಕೊಹ್ಲಿ ಪಡೆ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದೆ.

ಇಲ್ಲಿನ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಗೆಲ್ಲಲು ಆತಿಥೇಯ ತಂಡ ಕೊನೆಯ ದಿನ 219ರನ್‌ ಗಳಿಸಬೇಕಿದೆ. ಉಳಿದಿರುವ ಕೇವಲ ಆರು ವಿಕೆಟ್‌ ಮಾತ್ರ.

ಗುರುವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಎಲ್ಲ ವಿಕೆಟ್‌ ಕಳೆದುಕೊಂಡು 250 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಟಿಮ್‌ ಪೇನ್‌ ಬಳಗ 235 ರನ್‌ಗಳಿಗೆ ಆಲೌಟ್‌ ಆಗಿತ್ತು. 15 ರನ್‌ಗಳ ಅಲ್ಪ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲಿ 307 ರನ್‌ಗಳಿಸಿತ್ತು.


ಎರಡನೇ ಇನಿಂಗ್ಸ್‌ನಲ್ಲಿ 70 ರನ್‌ ಗಳಿಸಿದ ಅಜಿಂಕ್ಯಾ ರಹಾನೆ ಬ್ಯಾಟಿಂಗ್‌ ವೇಳೆ ಪುಟಿದ ಚೆಂಡನ್ನು ವೀಕ್ಷಿಸಿದ್ದು ಹೀಗೆ

ಸವಾಲಿನ ಗುರಿ ಎದುರು ಎರಡನೇ ಇನಿಂಗ್ಸ್‌ ಆರಂಭಿಸಿದ ಪೇನ್‌ ಬಳಗಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಬ್ಯಾಟಿಂಗ್‌ ಆರಂಭಿಸಿದ ಆ್ಯರನ್‌ ಫಿಂಚ್‌ ಹಾಗೂ ಮಾರ್ಕಸ್‌ ಹ್ಯಾರಿಸ್‌ ಜೋಡಿಯನ್ನು ಸ್ಪಿನ್ನರ್‌ ಅಶ್ವಿನ್‌ 12 ನೇ ಓವರ್‌ನಲ್ಲಿ ಬೇರ್ಪಡಿಸಿದರು. ಫಿಂಚ್‌ 11 ರನ್‌ ಗಳಿಸಿ ನಿರ್ಗಮಿಸಿದರೆ, ಹ್ಯಾರಿಸ್‌(26) 17ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ತಂಡದ ಮೊತ್ತ 44ರನ್‌.

ಬಳಿಕ ಬಂದ ಉಸ್ಮಾನ್‌ ಖವಾಜ(08) ಹಾಗೂ ಪೀಟರ್‌ ಹ್ಯಾಂಡ್ಸ್‌ಕಂಬ್‌(14) ಸಾಮರ್ಥ‌್ಯಕ್ಕೆ ತಕ್ಕ ಆಟವಾಡಲಿಲ್ಲ. ಸದ್ಯ ಶಾನ್‌ ಮಾರ್ಷ್‌ ಹಾಗೂ ಟ್ರಾವಿಸ್‌ ಹೆಡ್‌ ಕ್ರೀಸ್‌ನಲ್ಲಿದ್ದು, ಕ್ರಮವಾಗಿ 31, 11 ರನ್‌ ಗಳಿಸಿ ಆಡುತ್ತಿದ್ದಾರೆ.

ತಲಾ ಎರಡು ವಿಕೆಟ್‌ ಉರುಳಿಸಿರುವ ಅಶ್ವಿನ್‌ ಹಾಗೂ ಮೊಹಮದ್‌ ಶಮಿ, ಭಾರತ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !