ಶುಕ್ರವಾರ, ಏಪ್ರಿಲ್ 3, 2020
19 °C

ಟೆಸ್ಟ್‌: ನ್ಯೂಜಿಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ಬಿಗಿ ಹಿಡಿತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪರ್ತ್‌: ದಿನದ ಕೊನೆಯ ಅವಧಿಯಲ್ಲಿ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡರೂ ಆಸ್ಟ್ರೇಲಿಯಾ, ವಾಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ನ್ಯೂಜಿಲೆಂಡ್‌ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.

250 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ಆತಿಥೇಯರು ದಿನದಾಟ ಮುಗಿದಾಗ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 167 ರನ್‌ ಗಳಿಸಿದ್ದಾರೆ. ಒಟ್ಟಾರೆ ಮುನ್ನಡೆ 417 ರನ್‌ಗಳಿಗೆ ಬೆಳೆದಿದೆ.

ಮಾರ್ನಸ್‌ ಲಾಬುಶೇನ್‌ (50) ಮತ್ತು ಜೋ ಬರ್ನ್ಸ್‌ (53) ಅವರ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 1 ವಿಕೆಟ್‌ಗೆ 131 ರನ್‌ ಗಳಿಸಿತ್ತು. ಆದರೆ ನ್ಯೂಜಿಲೆಂಡ್‌ ತಂಡದ ಸ್ಫೂರ್ತಿಯುತ ಬೌಲಿಂಗ್‌ ಪ್ರದರ್ಶನದಿಂದ ಕೊನೆಯ ಅವಧಿಯಲ್ಲಿ ಆತಿಥೇಯರ ಐದು ವಿಕೆಟ್‌ಗಳು ಬಿದ್ದವು. ಟಿಮ್‌ ಸೌಥಿ 63 ರನ್ನಿಗೆ 4 ವಿಕೆಟ್‌ ಪಡೆದರು. ಡೇವಿಡ್‌ ವಾರ್ನರ್‌ ಅಬ್ಬರಿಸದಿ ದ್ದರೂ, 19 ರನ್‌ ಗಳಿಸುವ ಹಾದಿಯಲ್ಲಿ ಟೆಸ್ಟ್‌ಗಳಲ್ಲಿ ಏಳು ಸಹಸ್ರ ರನ್‌ ಪೂರೈಸಿದರು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 416 ಮತ್ತು 57 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 167 (ಜೆ.ಬರ್ನ್ಸ್‌ 53, ಮಾರ್ನಸ್‌ ಲಾಬುಶೇನ್‌ 50; ಸೌಥಿ 63ಕ್ಕೆ4, ವ್ಯಾಗ್ನರ್‌ 40ಕ್ಕೆ2); ನ್ಯೂಜಿಲೆಂಡ್‌: 55.2 ಓವರುಗಳಲ್ಲಿ 166 (ರಾಸ್‌ ಟೇಲರ್‌ 80, ಕಾಲಿನ್ ಡಿ ಗ್ರಾಂಧೋಮ್‌ 23; ಮಿಚೆಲ್‌ ಸ್ಟಾರ್ಕ್‌ 52ಕ್ಕೆ5, ಲಯನ್ 48ಕ್ಕೆ2).‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು