ವಿಶ್ವಕಪ್‌ ಕ್ರಿಕೆಟ್ 2019| ಆಸಿಸ್ ಎದುರು ಟಾಸ್ ಗೆದ್ದ ಪಾಕ್ ಬೌಲಿಂಗ್‌ ಆಯ್ಕೆ

ಸೋಮವಾರ, ಜೂನ್ 24, 2019
29 °C

ವಿಶ್ವಕಪ್‌ ಕ್ರಿಕೆಟ್ 2019| ಆಸಿಸ್ ಎದುರು ಟಾಸ್ ಗೆದ್ದ ಪಾಕ್ ಬೌಲಿಂಗ್‌ ಆಯ್ಕೆ

Published:
Updated:

ಟಾಂಟನ್ (ಇಂಗ್ಲೆಂಡ್): ಟಾಂಟನ್‌ನಲ್ಲಿರುವ ಕೌಂಟಿ ಪಿಚ್‌ನಲ್ಲಿ ಆಸ್ಟ್ರೇಲಿಯಾ ತಂಡದೆದುರು ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಉಭಯ ತಂಡಗಳು ಟೂರ್ನಿಯಲ್ಲಿ ತಲಾ ಮೂರು ಪಂದ್ಯಗಳನ್ನು ಆಡಿವೆ. ಎರಡು ಗೆಲುವುಗಳೊಂದಿಗೆ ಆಜೇಯ ಓಟ ಮುಂದುವರಿಸುವ ತವಕದಲ್ಲಿದ್ದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಭಾರತ ವಿರುದ್ಧದ ತನ್ನ ಮೂರನೇ ಪಂದ್ಯದಲ್ಲಿ 36ರನ್‌ ಅಂತರದ ಸೋಲುಕಂಡಿತ್ತು. ಇತ್ತ ಸರ್ಫರಾಜ್‌ ಖಾನ್‌ ನೇತೃತ್ವದ ಪಾಕಿಸ್ತಾನ ತಂಡ ತಲಾ ಒಂದು ಜಯ ಹಾಗೂ ಸೋಲು ಕಂಡಿದೆ. ಶ್ರೀಲಂಕಾ ವಿರುದ್ಧದ ಮೂರನೇ ಪಂದ್ಯ ಮಳೆಗೆ ಆಹುತಿಯಾಗಿತ್ತು.

ಹೀಗಾಗಿ ಜಯದ ಓಟ ಮುಂದುವರಿಸುವ ತವಕ ಪಾಕ್‌ ಪಡೆಯದ್ದಾದರೆ, ಗೆಲುವಿನ ಹಳಿಗೆ ಮರಳುವ ಬಯಕೆ ಆಸಿಸ್‌ ಬಳಗದ್ದು.

ಇದನ್ನೂ ಓದಿ: ಜಯದ ಹಾದಿಗೆ ಮರಳುವತ್ತ ಆಸ್ಟ್ರೇಲಿಯಾ ಚಿತ್ತ

ತಂಡಗಳು
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆ್ಯರನ್ ಫಿಂಚ್ (ನಾಯಕ), ಶಾನ್ ಮಾರ್ಷ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್,  ನೇಥನ್ ಕಾಲ್ಟರ್‌ನೇಲ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್),  ಪ್ಯಾಟ್ ಕಮಿನ್ಸ್‌, ಮಿಷೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್.

ಪಾಕಿಸ್ತಾನ: ಸರ್ಫರಾಜ್ ಅಹಮದ್ (ನಾಯಕ/ವಿಕೆಟ್‌ಕೀಪರ್), ಶಾಹೀನ್‌ ಆಫ್ರಿದಿ, ಅಸಿಫ್ ಅಲಿ, ಮೊಹಮ್ಮದ್ ಅಮಿರ್, ಬಾಬರ್ ಅಜಂ, ಮೊಹಮ್ಮದ್ ಹಫೀಜ್, ಇಮಾಮ್ ಉಲ್ ಹಕ್, ಹಸನ್‌ ಅಲಿ, ಶೋಯಬ್ ಮಲಿಕ್, ವಹಾಬ್ ರಿಯಾಜ್, ಫಕ್ರ್‌ ಜಮಾನ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !