ಸೋಮವಾರ, ಜೂನ್ 1, 2020
27 °C

ಪಾಕ್‌ ಏಕದಿನ ಕ್ರಿಕೆಟ್‌ ತಂಡಕ್ಕೆ ಬಾಬರ್‌ ಸಾರಥ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಪಾಕಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನಾಯಕರಾಗಿ ಬಾಬರ್‌ ಅಜಂ ನೇಮಕಗೊಂಡಿದ್ದಾರೆ. ಟೆಸ್ಟ್‌ ತಂಡವನ್ನು ಅಜರ್‌ ಅಲಿ ಅವರೇ ಮುನ್ನಡೆಸಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಬುಧವಾರ ಈ ವಿಷಯ ತಿಳಿಸಿದೆ. 

ಸದ್ಯ ಟ್ವೆಂಟಿ–20 ಮಾದರಿಗೆ ನಾಯಕರಾಗಿರುವ ಬಾಬರ್‌ ಅವರು, ಸರ್ಫರಾಜ್‌ ಅಹಮದ್‌ ಅವರಿಂದ ತೆರವಾದ ಏಕದಿನ ತಂಡವನ್ನೂ ಮುನ್ನಡೆಸಲಿದ್ದಾರೆ. 2020–21ರ ಋತುವಿನಲ್ಲಿ ಪಾಕಿಸ್ತಾನ ತಂಡವು ಏಷ್ಯಾಕಪ್‌, ಟಿ20 ವಿಶ್ವಕಪ್‌ ಹೊರತುಪಡಿಸಿ ಆರು ಏಕದಿನ ಹಾಗೂ 20 ಟ್ವೆಂಟಿ–20 ಪಂದ್ಯಗಳನ್ನು ಆಡಬೇಕಿದೆ.

‘ನಾಯಕತ್ವ ಪಡೆದ ಅಜರ್‌ ಹಾಗೂ ಬಾಬರ್‌ ಅವರನ್ನು ಅಭಿನಂದಿಸುತ್ತೇನೆ. ಇದು ಸರಿಯಾದ ನಿರ್ಧಾರ. ತಂಡದ ಭವಿಷ್ಯದ ಕುರಿತು ಇವರು ಯೋಜನೆಗಳನ್ನು ರೂಪಿಸುವರು ಮತ್ತು ತಂಡಕ್ಕೆ ನಿರೀಕ್ಷಿತ ಯಶಸ್ಸು ತಂದುಕೊಡಬಲ್ಲರು’ ಎಂದು ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಕೋಚ್‌ ಮಿಸ್ಬಾ ಉಲ್‌ ಹಕ್‌ ಹೇಳಿದ್ದನ್ನು ಪಿಸಿಬಿ ಉಲ್ಲೇಖಿಸಿದೆ.

2020–21ರ ಋತುವಿನ ಆಟಗಾರರ ಕೇಂದ್ರ ಗುತ್ತಿಗೆ ಪಟ್ಟಿಯನ್ನೂ ಪಿಸಿಬಿ ಬುಧವಾರ ಪ್ರಕಟಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು