ಶುಕ್ರವಾರ, ಮೇ 14, 2021
32 °C
ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿ: ಭರ್ಜರಿ ಜಯ ಗಳಿಸಿದ ಪಾಕಿಸ್ತಾನ

ರಿಜ್ವಾನ್, ಬಾಬರ್ ಜೊತೆಯಾಟದ ಸೊಬಗು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಪ್ರಿಟೋರಿಯ: ಮೋಹಕ ಶತಕ ಗಳಿಸಿದ ನಾಯಕ ಬಾಬರ್ ಆಜಂ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಆತಿಥೇಯ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಸೆಂಚುರಿಯನ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತು. ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿತು.

204 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನದ ಆರಂಭಿಕ ಜೋಡಿ ಮೊಹಮ್ಮದ್ ರಿಜ್ವಾನ್ (73; 47 ಎಸೆತ, 5 ಬೌಂಡರಿ, 2 ಸಿಕ್ಸರ್‌) ಮತ್ತು ಬಾಬರ್ ಆಜಂ (122; 59 ಎಸೆತ, 15 ಬೌಂ, 4 ಸಿ) ಪಾಕಿಸ್ತಾನ ಪರ ದಾಖಲೆಯ 197 ರನ್ ಸೇರಿಸಿದರು. ಬಾಬರ್ ಔಟಾದ ನಂತರ ಫಖರ್ ಜಮಾನ್ ಗೆಲುವಿನ ಔಪಚಾರಿಕತೆಯನ್ನು ಮುಗಿಸಿದರು. ಎರಡು ಓವರ್ ಬಾಕಿ ಇರುವಾಗಲೇ ತಂಡ 205 ರನ್‌ ಗಳಿಸಿ ಜಯದ ನಗೆ ಸೂಸಿತು.

ಶತಕದೊಂದಿಗೆ ಬಾಬರ್ ಪಾಕಿಸ್ತಾನ ಪರವಾಗಿ ಟಿ20ಯಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ಕಲೆ ಹಾಕಿದ ಆಟಗಾರ ಎನಿಸಿದರು. ರಿಜ್ವಾನ್ ಮತ್ತು ಬಾಬರ್ ಟಿ20 ಪಂದ್ಯದಲ್ಲಿ ಗರಿಷ್ಠ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ಎರಡನೇ ಜೋಡಿ ಎನಿಸಿಕೊಂಡರು. 

ದಕ್ಷಿಣ ಆಫ್ರಿಕಾ ಪರ ಜನೆಮನ್ ಮಲಾನ್ (55; 40 ಎ, 5 ಬೌಂ, 2 ಸಿ) ಮತ್ತು ಏಡನ್ ಮರ್ಕರಮ್ (63; 31ಎ, 6 ಬೌಂ, 4 ಸಿ) ಮೊದಲ ವಿಕೆಟ್‌ಗೆ 108 ರನ್ ಗಳಿಸಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಪೇರಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 5ಕ್ಕೆ 203 (ಜನೆಮನ್ ಮಲಾನ್ 55, ಏಡನ್ ಮರ್ಕರಮ್‌ 63, ವ್ಯಾನ್ ಡೆರ್‌ ಡುಸೆನ್‌ 34; ಶಹೀನ್ ಅಫ್ರಿದಿ 39ಕ್ಕೆ1, ಮೊಹಮ್ಮದ್‌ ನವಾಜ್‌ 38ಕ್ಕೆ2, ಹಸನ್ ಅಲಿ 47ಕ್ಕೆ1, ಫಹೀನ್‌ ಅಶ್ರಫ್‌ 37ಕ್ಕೆ1); ಪಾಕಿಸ್ತಾನ: 18 ಓವರ್‌ಗಳಲ್ಲಿ 1ಕ್ಕೆ 205 (ಮೊಹಮ್ಮದ್ ರಿಜ್ವಾನ್‌ 73, ಬಾಬರ್ ಆಜಂ 122; ಲಿಜಾಡ್‌ ವಿಲಿಯಮ್ಸ್‌ 34ಕ್ಕೆ1). ಫಲಿತಾಂಶ: ಪಾಕಿಸ್ತಾನಕ್ಕೆ 9 ವಿಕೆಟ್‌ಗಳ ಜಯ; 4 ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು