ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್ ಕ್ರಿಕೆಟ್: ಚೆನ್ನೈಗೆ ಬಂದಿಳಿದ ಬಾಂಗ್ಲಾ ತಂಡ

Published : 15 ಸೆಪ್ಟೆಂಬರ್ 2024, 16:22 IST
Last Updated : 15 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments

ಚೆನ್ನೈ: ಭಾರತ ತಂಡದ ಎದುರು ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡಲಿರುವ ಬಾಂಗ್ಲಾದೇಶ ತಂಡವು ಭಾನುವಾರ ಚೆನ್ನೈಗೆ ಬಂದಿಳಿಯಿತು. 

ಭಾರತದಲ್ಲಿ ಬಾಂಗ್ಲಾ ತಂಡವು 2 ಟೆಸ್ಟ್ ಮತ್ತು 3 ಟಿ20 ಪಂದ್ಯಗಳ ಸರಣಿಗಳಲ್ಲಿ ಆಡಲಿದೆ. ನಜ್ಮುಲ್ ಹುಸೇನ್ ಶಾಂತೊ ನಾಯಕತ್ವದ ಬಾಂಗ್ಲಾ ತಂಡವು ಪಾಕಿಸ್ತಾನದಲ್ಲಿ 2–0ಯಿಂದ ಸರಣಿ ಜಯ ಸಾಧಿಸಿ ಇಲ್ಲಿಗೆ ಬಂದಿದೆ. ಇದೇ 19ರಂದು ಚೆನ್ನೈನಲ್ಲಿ ಮೊದಲ ಟೆಸ್ಟ್ ನಡೆಯಲಿದೆ.

‘ಈ ಸರಣಿಯು ನಮಗೆ ಕಠಿಣ ಸವಾಲೊಡ್ಡಲಿದೆ. ಪಾಕಿಸ್ತಾನ ಎದುರು ಉತ್ತಮ ಸಾಧನೆ ಮಾಡಿದ ನಂತರ ನಮ್ಮಲ್ಲಿ ಆತ್ಮವಿಶ್ವಾಸ ಇಮ್ಮಡಿಸಿದೆ. ದೇಶದ ಜನರಿಗೂ ನಮ್ಮ ತಂಡದ ಮೇಲೆ ಅಪಾರ ನಿರೀಕ್ಷೆ ಮೂಡಿದೆ. ಸರಣಿಯ ಎರಡೂ ಟೆಸ್ಟ್‌ಗಳನ್ನು ಜಯಿಸುವ ಛಲದಲ್ಲಿದ್ದೇವೆ. ಯೋಜನೆಗೆ ಬದ್ಧವಾಗಿ ಆಡುತ್ತೇವೆ’ ಎಂದು ಶಾಂತೊ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಯ್ಲುಟಿಸಿ) ಪಾಯಿಂಟ್ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಈ ಎರಡೂ ಟೆಸ್ಟ್‌ಗಳು ಡಬ್ಲ್ಯುಟಿಸಿಯ ಭಾಗವಾಗಿವೆ.  

ಬಾಂಗ್ಲಾದೇಶ ತಂಡವು ಸೋಮವಾರದಿಂದ ಅಭ್ಯಾಸ ಆರಂಭಿಸಲಿದೆ. ಭಾರತ ತಂಡವು ಕಳೆದ ಮೂರು ದಿನಗಳಿಂದ ಅಭ್ಯಾಸ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT