ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್: ಶಾದ್ಮನ್ ಇಸ್ಲಾಂ ಅರ್ಧಶತಕ

Last Updated 3 ಫೆಬ್ರುವರಿ 2021, 15:46 IST
ಅಕ್ಷರ ಗಾತ್ರ

ಚಿತ್ತಗಾಂವ್: ಆರಂಭಿಕ ಬ್ಯಾಟ್ಸ್‌ಮನ್ ಶಾದ್ಮನ್ ಇಸ್ಲಾಂ ಗಳಿಸಿದ ಅರ್ಧಶತಕದ ಬಲದಿಂದ ಬಾಂಗ್ಲಾದೇಶ ತಂಡವು ಬುಧವಾರ ಆರಂಭವಾದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ ಪಂದ್ಯದ ಮೊದಲ ದಿನ ಗೌರವಾರ್ಹ ಮೊತ್ತ ಗಳಿಸಿತು.

ಜಹೂರ್ ಅಹಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಬಾಂಗ್ಲಾ ತಂಡವು ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 242 ರನ್‌ ಗಳಿಸಿದೆ.

ಬೆಳಿಗ್ಗೆ ಬ್ಯಾಟಿಂಗ್ ಆರಂಭಿಸಿದ ಆತಿಥೇಯರಿಗೆ ಕೇಮರ್ ರೋಚ್ ಮೊದಲ ಪೆಟ್ಟು ಕೊಟ್ಟರು. ಕೇವಲ 9 ರನ್ ಗಳಿಸಿದ್ದ ತಮೀಮ್ ಇಕ್ಬಾಲ್ ಅವರ ವಿಕೆಟ್ ಕಬಳಿಸಿದರು. ಈ ಹಂತದಲ್ಲಿ ಇಸ್ಲಾಮ್ ಮತ್ತು ನಜ್ಮುಲ್ ಹಸನ್ ಶಾಂತೊ (25; 58ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 43 ರನ್‌ ಸೇರಿಸಿದರು. ನಜ್ಮುಲ್ ರನ್‌ಔಟ್ ಆದ ಕಾರಣ ಜೊತೆಯಾಟ ಮುರಿಯಿತು. ಇಸ್ಲಾಂ ಮತ್ತು ನಾಯಕ ಮೊಮಿನುಲ್ ಹಕ್ (26; 97ಎ) ಸೇರಿ ಮೂರನೇ ವಿಕೆಟ್‌ಗೆ 53 ರನ್‌ ಕಲೆಹಾಕಿದರು. ವಿಂಡೀಸ್‌ನ ಎಡಗೈ ಸ್ಪಿನ್ನರ್ ಜೊಮೆಲ್ ವಾರಿಕನ್ ಅವರು ಮೊಮಿನುಲ್ ವಿಕೆಟ್ ಗಳಿಸಿ ಜೊತೆಯಾಟಕ್ಕೆ ತೆರೆ ಎಳೆದರು. 57ನೇ ಓವರ್‌ನಲ್ಲಿ ಜೊಮೆಲ್ ಅವರು ಇಸ್ಲಾಂ (59; 154 ಎ, 6ಬೌಂಡರಿ) ಅವರನ್ನೂ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಈ ಸಂದರ್ಭದಲ್ಲಿ ಉತ್ತಮವಾಗಿ ಅಡಿದ ಮುಷ್ಫಿಕುರ್ ರಹೀಮ್ (38; 69ಎ) ಅವರಿಗೂ ಪೆವಿಲಿಯನ್ ದಾರಿ ತೋರಿಸಿದವರು ಜೋಯೆಲ್.

ಆದರೆ, ಅನುಭವಿ ಆಟಗಾರ ಶಕೀಬ್ (ಬ್ಯಾಟಿಂಗ್ 39) ಮತ್ತು ಲಿಟನ್ ದಾಸ್ (ಬ್ಯಾಟಿಂಗ್ 34) ಅವರು ತಂಡದ ವಿಕೆಟ್‌ ಪತನಕ್ಕೆ ತಡೆಯೊಡ್ಡಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 90 ಓವರ್‌ಗಳಲ್ಲಿ 5ಕ್ಕೆ242 (ಶಾದ್ಮನ್ ಇಸ್ಲಾಮ್ 59, ನಜೀಮುಲ್ ಹಸನ್ ಶಾಂತೊ 25, ಮೊಮಿನುಲ್ ಹಕ್ 26, ಮುಷ್ಫಿಕುರ್ ರಹೀಮ್ 38, ಶಕೀಬ್ ಅಲ್ ಹಸನ್ ಬ್ಯಾಟಿಂಗ್ 39, ಲಿಟನ್ ದಾಸ್ ಬ್ಯಾಟಿಂಗ್ 34, ಜೊಮೆಲ್ ವಾರಿಕನ್ 58ಕ್ಕೆ3) ವೆಸ್ ಇಂಡೀಸ್ ವಿರುದ್ಧದ ಪಂದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT