ಚತ್ತೋಗ್ರಾಮ್, ಬಾಂಗ್ಲಾದೇಶ: ನಜ್ಮುಲ್ ಹುಸೇನ್ ಅವರ ವೇಗದ ಅರ್ಧಶತಕ ಹಾಗೂ ನಾಯಕ ಶಕೀಬ್ ಅಲ್ ಹಸನ್ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಬಾಂಗ್ಲಾದೇಶ ತಂಡವು ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿತು.
ಗುರುವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ಆರು ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.
ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ನಾಯಕ ಜೋಸ್ ಬಟ್ಲರ್ (67 ರನ್, 42 ಎ, 4X4, 6X4) ಅರ್ಧಶತಕ ಹಾಗೂ ಫಿಲ್ ಸಾಲ್ಟ್ (38, 35ಎ, 4X4, 6X1) ನೆರವಿನಿಂದ ಇಂಗ್ಲೆಂಡ್ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು. ಇವರಿಬ್ಬರು ಮೊದಲ ವಿಕೆಟ್ ಜೊತೆಯಾಟದಲ್ಲಿ 80 ರನ್ ಕಲೆಹಾಕಿದರು.
ಬಾಂಗ್ಲಾ ಪರ ಹಸನ್ ಮಹಮೂದ್ (26ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.
ಗುರಿ ಬೆನ್ನತ್ತಿದ ಬಾಂಗ್ಲಾ ಎರಡು ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ನಜ್ಮುಲ್ ಹುಸೇನ್ (51 ರನ್, 30ಎ, 4X8) ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ತೌಹಿದ್ ಹ್ರಿದೊಯ್ (24) ಮತ್ತು ಶಕೀಬ್ (34, 24ಎ, 4X6) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 156 (ಫಿಲ್ ಸಾಲ್ಟ್ 38, ಜೋಸ್ ಬಟ್ಲರ್ 67, ಬೆನ್ ಡಕೆಟ್ 20; ನಾಸುಮ್ ಅಹಮದ್ 31ಕ್ಕೆ 1, ಶಕೀಬ್ ಅಲ್ ಹಸನ್ 26ಕ್ಕೆ 1, ಹಸನ್ ಮಹಮೂದ್ 26ಕ್ಕೆ 2).
ಬಾಂಗ್ಲಾದೇಶ: 18 ಓವರ್‌ಗಳಲ್ಲಿ 4ಕ್ಕೆ 158 (ರೋನಿ ತಾಲೂಕ್ದಾರ್ 21, ನಜ್ಮುಲ್ ಹುಸೇನ್ ಶಾಂತೊ 51, ತೌಹಿದ್ ಹ್ರಿದೊಯ್ 24, ಶಕೀಬ್ ಅಲ್ ಹಸನ್ ಔಟಾಗದೆ 34; ಜೋರ್ಫಾ ಆರ್ಚರ್ 27ಕ್ಕೆ 1, ಆದಿಲ್ ರಶೀದ್ 25ಕ್ಕೆ 1, ಮಾರ್ಕ್ ವುಡ್ 24ಕ್ಕೆ 1, ಮೋಯಿನ್ ಅಲಿ 27ಕ್ಕೆ 1).
ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ ಆರು ವಿಕೆಟ್ ಜಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.