ಬುಧವಾರ, ಮಾರ್ಚ್ 3, 2021
18 °C

ಬಿಸಿಸಿಐ ಎಜಿಎಂ ಇಂದು: ಐಪಿಎಲ್‌ಗೆ ಇನ್ನೆರಡು ತಂಡಗಳ ಸೇರ್ಪಡೆ ಚರ್ಚೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮತ್ತೆರಡು ತಂಡಗಳನ್ನು ಸೇರ್ಪಡೆ ಮಾಡುವ ಕುರಿತು ಗುರುವಾರ ಇಲ್ಲಿ ನಡೆಯಲಿರುವ ಬಿಸಿಸಿಐ ಸರ್ವಸದಸ್ಯರ ಸಭೆಯಲ್ಲಿ ಚರ್ಚೆ ನಡೆಯಲಿದೆ.

‘ಮುಂದಿನ ವರ್ಷದ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳನ್ನು ಸೇರ್ಪಡೆ ಮಾಡುವ ಉದ್ದೇಶ ಬಿಸಿಸಿಐಗಿತ್ತು. ಆದರೆ, ಮೇಗಾ ಹರಾಜು ಪ್ರಕ್ರಿಯೆ ನಡೆಸಲು ಸಮಯದ ಕೊರತೆ ಇದೆ. ಆದ್ದರಿಂದ 2022ರ ಟೂರ್ನಿಯಲ್ಲಿ ತಂಡಗಳ ಸೇರ್ಪಡೆಯ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ಭಾರತದಲ್ಲಿ ಆಯೋಜಿಸಲಾಗುವುದು. ಎರಡು ವರ್ಷಗಳ ನಂತರ 94 ಪಂದ್ಯಗಳ ಟೂರ್ನಿ ನಡೆಯುವುದು.  ಐಸಿಸಿಯ ಟೂರ್ನಿಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸುವ ಕುರಿತು ಚರ್ಚಿಸಲಾಗುವುದು‘ ಎಂದು ಮೂಲಗಳು ತಿಳಿಸಿವೆ.

’2028ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಬೆಂಬಲಿಸುವ ಕುರಿತು ಬಿಸಿಸಿಐ ನಿರ್ಣಯ ಕೈಗೊಳ್ಳುವ ಸಾಧ್ಯತ ಇದೆ. ಒಂದೊಮ್ಮೆ ಬೆಂಬಲಿಸಿದರೆ, ಮಂಡಳಿಯು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು, ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಆಗಬೇಕಾಗುತ್ತದೆ. ಆದ್ದರಿಂದ ಈ ಕುರಿತು ಚಿಂತನೆ ನಡೆಯುವ ಸಾಧ್ಯತೆ ಇದೆ‘ ಎಂದು ಮೂಲಗಳು ತಿಳಿಸಿವೆ.

’ಕ್ರಿಕೆಟ್ ಸಲಹಾ ಸಮಿತಿ, ತಾಂತ್ರಿಕ ಸಮಿತಿ, ಅಂಪೈರಿಂಗ್ ಸಮಿತಿ ಸೇರಿದಂತೆ ಪ್ರಮುಖ ಸಮಿತಿಗಳ ರಚನೆಯ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಬಹುದು‘ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಭೆಯ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಜಯ್ ಶಾ,  ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಭಾಗವಹಿಸುವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು