ಎನ್‌ಸಿಎಗೆ ದ್ರಾವಿಡ್ ಖಚಿತ

ಮಂಗಳವಾರ, ಜೂಲೈ 16, 2019
28 °C

ಎನ್‌ಸಿಎಗೆ ದ್ರಾವಿಡ್ ಖಚಿತ

Published:
Updated:
Prajavani

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರ ಸ್ಥಾನಕ್ಕೆ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ನೇಮಕ ಖಚಿತವಾಗಿದೆ.

ಹೋದ ತಿಂಗಳು ಅವರನ್ನು ನೇಮಕ ಮಾಡಿದ್ದನ್ನು ಬಿಸಿಸಿಐ ಪ್ರಕಟಿಸಿತ್ತು. ಅವರು ಜುಲೈ 1ರಂದು ಅಧಿಕಾರ ಸ್ವೀಕರಿಸಬೇಕಿತ್ತು. ಅದರೆ, ಇಂಡಿಯಾ ಸಿಮೆಂಟ್ಸ್‌ ಕಂಪನಿಯಲ್ಲಿ ಅವರು ಉಪಾಧ್ಯಕ್ಷ ಸ್ಥಾನ ಹೊಂದಿದ್ದಾರೆ. ಆದ್ದರಿಂದ ಎನ್‌ಸಿಎಗೆ ಮುಖಸ್ಥರಾಗುವುದು ಹಿತಾಸಕ್ತಿ ಸಂಘರ್ಷ ತಡೆ ನಿಯಮದ ಉಲ್ಲಂಘನೆಯಾಗಲಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ ದೂರು ನೀಡಿದ್ದರು. ಆದರೆ ಈಗ ಎನ್‌ಸಿಎ ಅಧಿಕಾರದ ಅವಧಿ ಮುಗಿಯುವವರೆಗೂ ದ್ರಾವಿಡ್ ಅವರಿಗೆ ರಜೆ ಮಂಜೂರು ಮಾಡಿರುವುದಾಗಿ ಇಂಡಿಯಾ ಸಿಮೆಂಟ್ಸ್‌ ಪ್ರಕಟಿಸಿದೆ.

 ‘ದ್ರಾವಿಡ್ ಅವರು ಎನ್‌ಸಿಎ ಮುಖ್ಯಸ್ಥರಾಗಲಿದ್ದಾರೆ. ಅವರು ಯುವ ಆಟಗಾರರ ತರಬೇತಿ, ಪುನಶ್ಚೇತನ, ಕೋಚ್‌, ನೆರವು ಸಿಬ್ಬಂದಿಗಳಿಗೆ ತರಬೇತಿ ಮತ್ತಿತರ ಕಾರ್ಯಗಳನ್ನು ನಿಭಾಯಿಸುವರು. ರಾಷ್ಟ್ರೀಯ ಪುರುಷ ಮತ್ತು ಮಹಿಳಾ ತಂಡಗಳಿಗೂ ಅವರು ನೆರವಾಗಲಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !