ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ಸೂನ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಐಪಿಎಲ್‌: ಬಿಸಿಸಿಐ ಸಿಇಒ

Last Updated 21 ಮೇ 2020, 5:57 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್‌-2020 ಆಯೋಜನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ,ಮಾನ್ಸೂನ್‌ ಬಳಿಕ ಭಾರತ ಮತ್ತು ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡಂತೆಯೇ ಐಪಿಎಲ್‌ ನಡೆಯಲಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ 18 ರಿಂದ ನವೆಂಬರ್‌ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಟೂರ್ನಿಯು ಅಂದುಕೊಂಡಂತೆ ನಡೆಯಲಿದೆಯೇ ಎಂಬುದರ ಮೇಲೆ ಐಪಿಎಲ್‌ ಭವಿಷ್ಯ ನಿಂತಿದೆ. ಕೋವಿಡ್‌–19 ಭೀತಿಯಿಂದಾಗಿ ವಿಶ್ವಕಪ್‌ ಮುಂದೂಡುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೇ ತಿಂಗಳ 28ರಂದು ಪ್ರಕಟಿಸಲಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಜೋಹ್ರಿ, ‘ಅತಿಹೆಚ್ಚು ವೀಕ್ಷಕರನ್ನು ಹೊಂದಿರುವ ಟೂರ್ನಿಗಳಲ್ಲಿ ಐಪಿಎಲ್‌ಕೂಡ ಒಂದಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಿದವರಿಗಿಂತಲೂ ಹೆಚ್ಚು ಜನರು ಕಳೆದ ವರ್ಷಐಪಿಎಲ್‌ ವೀಕ್ಷಿಸಿದ್ದಾರೆ. ಪ್ರಾಯೋಜಕರಿಗೆ ಕ್ರಿಕೆಟ್‌ ಲಾಭ ತಂದುಕೊಡಲಿದೆ’ ಎಂದುತಿಳಿಸಿದ್ದಾರೆ.

‘ಐಪಿಎಲ್‌ ಗುಣಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ತಮ ಆಟಗಾರರು ಕಾಪಾಡಲಿದ್ದಾರೆ ಮತ್ತು ಅದಕ್ಕೆ ಬದ್ಧರಾಗಿದ್ದಾರೆ. ಆದರೆ ಇದು ಹಂತಹಂತವಾಗಿ ನಡೆಯಬೇಕಾದ ಪ್ರಕ್ರಿಯೆ. ಎಲ್ಲವೂ ನಾಳೆಗೆ ಸಾಮಾನ್ಯಸ್ಥಿತಿಗೆ ಮರಳಬೇಕೆಂದು ನಿರೀಕ್ಷಿಸಲಾಗದು’ ಎಂದಿದ್ದಾರೆ. ಮುಂದುವರಿದು, ‘ಐಪಿಎಲ್‌ನಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬ ಆಟಗಾರರ ನಿರ್ಧಾರವನ್ನು ಗೌರವಿಸಲಾಗುವುದು’ ಎಂದೂ ಹೇಳಿದ್ದಾರೆ.

ಪ್ರೇಕ್ಷಕರಿಗೆ ಅವಕಾಶ ನೀಡದೆ (ಖಾಲಿ ಕ್ರೀಡಾಂಗಣಗಳಲ್ಲಿ)ಕ್ರೀಡಾಕೂಟಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಈ ರೀತಿಯಲ್ಲಿ ಐಪಿಎಲ್‌ ಸಾದ್ಯವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಹ್ರಿ, ‘ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಿದ್ದೇವೆ. ನಮ್ಮ ಸಲಹೆ ಕೇಳಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಐಪಿಎಲ್‌ ಸ್ಥಗಿತಗೊಳಿಸಲಾಗಿದೆ. ಈಗ ಮಾನ್ಸೂನ್‌ ಇರುವುದರಿಂದ ಮತ್ತು ಸದ್ಯದ ಲಾಕ್‌ಡೌನ್‌ ಅವಧಿ ಮುಗಿದ ನಂತರ ಕ್ರಿಕೆಟ್‌ ಚಟುವಟಿಕೆಗಳು ಆರಂಭವಾಗಲಿವೆ. ಅದಾದ ಬಳಿಕ ಐಪಿಎಲ್‌ ಪ್ರಕ್ರಿಯೆಯೂ ಮುಂದುವರಿಯುವ ಆಶಾಭಾವವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT