ದೇಶಕ್ಕೆ ಮರಳಿದ ವಿಂಗ್ ಕಮಾಂಡರ್‌ ಅಭಿನಂದನ್‌ಗೆ ಬಿಸಿಸಿಐ, ಕ್ರಿಕೆಟಿಗರಿಂದ ಗೌರವ 

ಬುಧವಾರ, ಮಾರ್ಚ್ 20, 2019
31 °C

ದೇಶಕ್ಕೆ ಮರಳಿದ ವಿಂಗ್ ಕಮಾಂಡರ್‌ ಅಭಿನಂದನ್‌ಗೆ ಬಿಸಿಸಿಐ, ಕ್ರಿಕೆಟಿಗರಿಂದ ಗೌರವ 

Published:
Updated:

ಮುಂಬೈ: ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ದೇಶಕ್ಕೆ ಮರಳಿದ ಹಿನ್ನೆಲೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಸೇರಿದಂತೆ ಹಲವು ಕ್ರಿಕೆಟಿಗರು ಟ್ವಿಟರ್‌ನಲ್ಲಿ ಗೌರವ ಸಲ್ಲಿಸಿದ್ದಾರೆ. 

ಶುಕ್ರವಾರ ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ಸಾದ ಅಭಿನಂದನ್‌ಗೆ ಟ್ವಿಟರ್‌ನಲ್ಲಿ ಸ್ವಾಗತ ಕೋರಿರುವ ಬಿಸಿಸಿಐ, ‘ಅಭಿನಂದನ್‌ಗೆ ಸ್ವಾಗತ, ನೀವು ಆಕಾಶವನ್ನು ಆಳುವುದರ ಜತೆಗೆ ನಮ್ಮ ಹೃದಯವನ್ನು ಗೆದ್ದಿದ್ದೀರಿ. ನಿಮ್ಮ ಧೈರ್ಯ ಹಾಗೂ ಘನತೆ ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ’ ಎಂದು ಬರೆಯಲಾಗಿದೆ. ಜತೆಗೆ, ಭಾರತದ ಕ್ರಿಕೆಟ್‌ ತಂಡದ ಜರ್ಸಿ ನಂ 1 ಕ್ಕೆ ವಿಂಗ್‌ ಕಮಾಂಡರ್‌ ಅಭಿನಂದನ್‌  ವರ್ಧಮಾನ್‌ ಹೆಸರು ಪ್ರಕಟಿಸಿದ ಚಿತ್ರವನ್ನು ಹಂಚಿಕೊಂಡಿದೆ. 

ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಟ್ವೀಟ್‌ ಮಾಡುವ ಮೂಲಕ ಅಭಿನಂದನ್‌ಗೆ ಗೌರವ ಸೂಚಿಸಿದ್ದಾರೆ. 

ಇದನ್ನೂ  ಓದಿ... ತಾಯ್ನಾಡಿಗೆ ‘ಅಭಿ’ವಂದನೆ, ಆತಂಕ ಸೃಷ್ಟಿಸಿದ ವಿಳಂಬ

ಇತ್ತೀಚೆಗೆ ಭಾರತದ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಷ್‌ನದ್ದೆಂದು ಹೇಳಲಾದ ಶಿಬಿರದ ಮೇಲೆ ಫೆ. 26ರಂದು ದಾಳಿ ನಡೆಸಿತ್ತು. ಮರುದಿನ ಎಫ್‌ 16 ವಿಮಾನಗಳೂ ಇದ್ದ 24 ಯುದ್ಧ ವಿಮಾನಗಳೊಂದಿಗೆ ಭಾರತದ ಮೇಲೆ ದಾಳಿಗೆ ಬಂದಿತ್ತು. ಈ ದಾಳಿಯನ್ನು ಭಾರತದ ವಾಯುಪಡೆಯ ಎಂಟು ಮಿಗ್‌ 21 ವಿಮಾನಗಳು ಹಿಮ್ಮೆಟ್ಟಿಸಿದ್ದವು. ಈ ಪ್ರಯತ್ನದಲ್ಲಿ ಅಭಿನಂದನ್‌ ಪೈಲಟ್‌ ಆಗಿದ್ದ ವಿಮಾನ ಪತನವಾಗಿತ್ತು. ಅವರು ಪ್ಯಾರಾಚೂಟ್‌ ಮೂಲಕ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದರು. ಅವರನ್ನು ಪಾಕಿಸ್ತಾನದಸೇನೆ ವಶಕ್ಕೆ ಪಡೆದಿತ್ತು.  ಭಾರತ ಮತ್ತು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಿದೆ.

* ಇವನ್ನೂ ಓದಿ...

ಅಭಿನಂದನ್‌ ಹೆತ್ತವರಿಗೆ ಅಪ್ರತಿಮ ಗೌರವ

ಅಪ್ಪ–ಮಗನನ್ನು ಬಿಡದ ಮಿಗ್–21 ನಂಟು

ದಾಳಿ ರೂವಾರಿ ವಿರುದ್ಧ ಪಾಕ್‌ ಅಪಪ್ರಚಾರ

ನಮ್ಮಲ್ಲೇ ಇದ್ದಾನೆ ಉಗ್ರ ಅಜರ್‌: ಪಾಕ್‌

ಪಾಕ್‌ ಸೇನೆಯಲ್ಲಿ ವೃತ್ತಿಪರತೆ ಕಂಡೆ: ಅಭಿನಂದನ್

 

ಬರಹ ಇಷ್ಟವಾಯಿತೆ?

 • 39

  Happy
 • 1

  Amused
 • 3

  Sad
 • 0

  Frustrated
 • 3

  Angry

Comments:

0 comments

Write the first review for this !