ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ರೋಜರ್ ಬಿನ್ನಿ ಅವರು ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ್ದಾರೆಂದು ನೀತಿ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಡಿಸೆಂಬರ್ 20ರೊಳಗೆ ವಿವರಣೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

‘ಬಿನ್ನಿ ಅವರ ಸೊಸೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ತವರಿನಲ್ಲಿ ಆಡುವ ಕೆಲವು ಸರಣಿಗಳ ನೇರಪ್ರಸಾರದ ಹಕ್ಕುಗಳನ್ನು ಸ್ಟಾರ್ ಹೊಂದಿದೆ. ಇದು ಹಿತಾಸಕ್ತಿ ಸಂಘರ್ಷ’ ಎಂದು ಮಧ್ಯಪ್ರದೇಶದ ಸಂಜೀವ್ ಗುಪ್ತಾ ದೂರು ಸಲ್ಲಿಸಿದ್ದಾರೆ.

‘ಬಿಸಿಸಿಐ ನಿಯಮ 39(2)(ಬಿ) ಅಡಿಯಲ್ಲಿ ದೂರು ಸ್ವೀಕರಿಸಲಾಗಿದೆ. ತಾವು 38 (1) (ಐ) ಮತ್ತು 38 (2) ನಿಯಮವನ್ನು ಉಲ್ಲಂಘಿಸಿದ್ದೀರಿ. ಇದು ಹಿತಾಸಕ್ತಿ ಸಂಘರ್ಷವಾಗಿದೆ’ ಎಂದು ನೀತಿ ಅಧಿಕಾರಿ ವಿನೀತ್ ಸರನ್ ಅವರು ಬಿನ್ನಿಯವರಿಗೆ ನೋಟಿಸ್ ನೀಡಿದ್ದಾರೆ.

ಕಳೆದ ಅಕ್ಟೋಬರ್ನಲ್ಲಿ 67 ವರ್ಷದ ಬಿನ್ನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ವಿಶ್ವಕಪ್ ಜಯಿಸಿದ ಭಾರತ ತಂಡದ ಆಲ್ರೌಂಡರ್ ಆಗಿ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.