ಮಂಗಳವಾರ, ಅಕ್ಟೋಬರ್ 27, 2020
26 °C

IPL | ಬ್ಯಾಟ್ಸ್‌ಮನ್‌ಗಳ ಆಟದಲ್ಲಿ ಚಾಹಲ್‌ಗೆ ಪ್ರಶಸ್ತಿ ನೀಡಬೇಕಿತ್ತು: ಸ್ಟೋಕ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರ ರಾತ್ರಿ ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿದ್ದ ಎಬಿ ಡಿ ವಿಲಿಯರ್ಸ್‌ ಅವರ ಬದಲು ಉತ್ತಮವಾಗಿ ಬೌಲಿಂಗ್‌ ಮಾಡಿದ್ದ ಯಜುವೇಂದ್ರ ಚಾಹಲ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಇಂಗ್ಲೆಂಡ್‌ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ವಿಲಿಯರ್ಸ್‌ ಅವರ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು 194 ರನ್ ಗಳಿಸಿತ್ತು. ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ಎಬಿ ಡಿ ವಿಲಿಯರ್ಸ್ 33 ಎಸೆತಗಳಲ್ಲಿ ಅಜೇಯ 73 ರನ್‌ ಬಾರಿಸಿದ್ದರು. ಆರು ಸಿಕ್ಸರ್‌ಗಳು ಎಬಿ ಡಿ ಬ್ಯಾಟ್‌ನಿಂದ ಸಿಡಿದಿದ್ದವು.

ಗುರಿ ಬೆನ್ನತ್ತಿದ ಕೆಕೆಆರ್‌ 9 ವಿಕೆಟ್‌ ಕಳೆದುಕೊಂಡು ಕೇವಲ 112 ರನ್‌ ಗಳಿಸಿತ್ತು. ಯಜುವೇಂದ್ರ ಚಾಹಲ್ ತಮ್ಮ ಕೋಟಾದ 4 ಓವರ್‌ ಬೌಲ್‌ ಮಾಡಿ ಕೇವಲ 12 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು.

ಇದನ್ನೂ ಓದಿ: 

ಈ ಬಗ್ಗೆ ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸ್ಟೋಕ್ಸ್‌, ‘ಬ್ಯಾಟ್ಸ್‌ಮನ್‌ಗಳ ಆಟದಲ್ಲಿ ಯುಜುವೇಂದ್ರ ಚಾಹಲ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು. ಮುಖ್ಯವಾಗಿ ಶಾರ್ಜಾದಂತಹ ಕ್ರೀಡಾಂಗಣದಲ್ಲಿ ನಂಬಲಾಗದ ರೀತಿ ಬೌಲಿಂಗ್‌ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಸ್ಟೋಕ್ಸ್ ಅವರು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು