ದುಬೈ: ಪುನರಾಗಮನದ ಸರಣಿಯಲ್ಲೇ ಭಾರತದ ಬಲಗೈ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಐಸಿಸಿ 'ತಿಂಗಳ ಆಟಗಾರ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗಾಯದಿಂದಾಗಿ ಸುದೀರ್ಘ ಸಮಯ ಭುವಿ ತಂಡದಿಂದ ಹೊರಗುಳಿದಿದ್ದರು. ಇತ್ತೀಚೆಗಷ್ಟೇ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಭರ್ಜರಿ ಪುನರಾಗಮನ ಮಾಡಿದ್ದರು.

ಇದನ್ನೂ ಓದಿ:IPL 2021: ಹೈದರಾಬಾದ್ ಸವಾಲು ಮೀರುವುದೇ ಆರ್ಸಿಬಿ?

ಮಾರ್ಚ್ ತಿಂಗಳಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 31 ವರ್ಷದ ಭುವಿ 4.65ರ ಎಕಾನಮಿ ರೇಟ್ನಲ್ಲಿ ಆರು ವಿಕೆಟ್ಗಳನ್ನು ಕಬಳಿಸಿದ್ದರು. ಹಾಗೆಯೇ ಐದು ಪಂದ್ಯಗಳಟಿ20 ಸರಣಿಯಲ್ಲಿ 6.38ರ ಎಕಾನಮಿ ರೇಟ್ನಲ್ಲಿನಾಲ್ಕುವಿಕೆಟ್ಗಳನ್ನು ಪಡೆದಿದ್ದರು. ಈ ಮೂಲಕ ಭಾರತದ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

'ಅತ್ಯಂತ ನೋವಿನ ದೀರ್ಘ ಅಂತರದ ಬಳಿಕ ಭಾರತಕ್ಕೆ ಮತ್ತೆ ಆಡಲು ಸಾಧ್ಯವಾಗಿರುವುದು ಅತ್ಯಂತ ಖುಷಿ ನೀಡಿದೆ. ಈ ಸಮಯದಲ್ಲಿ ನಾನು ಫಿಟ್ನೆಸ್ ಹಾಗೂ ಕೌಶಲ್ಯ ವೃದ್ಧಿಯತ್ತ ಗಮನ ಹರಿಸಿದ್ದೆ. ದೇಶಕ್ಕಾಗಿ ಮತ್ತೆ ವಿಕೆಟ್ ಗಳಿಸಲು ಸಾಧ್ಯವಾಗಿರುವುದು ಸಂತೃಪ್ತಿಯನ್ನು ನೀಡಿದೆ' ಎಂದು ಭುವಿ ಹೇಳಿಕೆಯನ್ನು ಐಸಿಸಿ ಪ್ರಕಟಿಸಿದೆ.

ವರ್ಷಾರಂಭದಲ್ಲಿ ಐಸಿಸಿ ಪರಿಚಯಿಸಿರುವ ತಿಂಗಳ ಆಟಗಾರ ಪ್ರಶಸ್ತಿ ಪಟ್ಟಿಯಲ್ಲಿ ಸತತ ಮೂರನೇ ಬಾರಿಗೆ ಭಾರತೀಯ ಆಟಗಾರರೂ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಈ ಮೊದಲು ಜನವರಿ ತಿಂಗಳಲ್ಲಿ ರಿಷಭ್ ಪಂತ್ ಮತ್ತು ಫೆಬ್ರವರಿ ತಿಂಗಳಲ್ಲಿ ರವಿಚಂದ್ರನ್ ಅಶ್ವಿನ್ ಪ್ರಶಸ್ತಿ ಗಿಟ್ಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.