ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ ಬ್ಯಾಷ್‌ ಟಿ20: ಘಟಾನುಘಟಿಗಳಿದ್ದ ಸಿಡ್ನಿ ಥಂಡರ್ಸ್ ತಂಡ 15ರನ್‌ಗೆ ಆಲೌಟ್

Last Updated 17 ಡಿಸೆಂಬರ್ 2022, 4:26 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್‌ ತಂಡ ಅಡಿಲೇಡ್‌ ಸ್ಟೈಕರ್ಸ್‌ ವಿರುದ್ಧ ಕೇವಲ 15 ರನ್‌ಗಳಿಗೆ ಆಲೌಟಾಯಿತು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿಕನಿಷ್ಠ ಸ್ಕೋರ್‌ ಸರ್ವಪತನ ಕಂಡು ಮುಖಭಂಗ ಅನುಭವಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸ್ಟೈಕರ್ಸ್‌, ಕ್ರಿಸ್‌ ಲಿನ್‌ (36) ಹಾಗೂ ಕಾಲಿನ್‌ ಡಿ. ಗ್ರಾಂಡ್‌ಹೋಂ (33) ಅವರ ಉಪಯುಕ್ತ ಆಟದ ನೆರವಿನಿಂದ 9 ವಿಕೆಟ್‌ ನಷ್ಟಕ್ಕೆ139 ರನ್‌ ಗಳಿಸಿತ್ತು.

ಈ ಸಾಧಾರಣ ಗುರಿ ಬೆನ್ನಟ್ಟಿದ ಥಂಡರ್ಸ್‌ ಕೇವಲ 5.5 ಓವರ್‌ಗಳಲ್ಲಿ 15 ರನ್‌ಗಳಿಗೆ ಆಲೌಟಾಗಿ, 124 ರನ್‌ಗಳಿಂದ ಸೋತಿತು. ಥಂಡರ್ಸ್‌ ಪಡೆಯ ಐವರು ಬ್ಯಾಟರ್‌ಗಳು ಸೊನ್ನೆ ಸುತ್ತಿದರೆ, ಯಾರೊಬ್ಬರೂ ಎರಡಂಕಿ ಮೊತ್ತ ಗಳಿಸಲಿಲ್ಲ.ಸ್ಫೋಟಕ ಬ್ಯಾಟಿಂಗ್‌ ಮೂಲಕಟಿ20 ಸ್ಪೆಷಲಿಸ್ಟ್‌ಗಳೆನಿಸಿದ್ದ ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌ (0), ದಕ್ಷಿಣ ಆಫ್ರಿಕಾದ ರೈಲಿ ರುಸ್ಸೋ (3), ಆಸ್ಟ್ರೇಲಿಯಾದ ಆಲ್‌ರೌಂಡರ್‌ಡೇನಿಯಲ್‌ ಸ್ಯಾಮ್ಸ್‌ (1) ಹೀನಾಯ ಪ್ರದರ್ಶನ ತೋರಿದರು.

ಹೆನ್ರಿ ಥಾರ್ಟನ್‌ (3ಕ್ಕೆ 5) ಮತ್ತು ವೆಸ್‌ ಅಗರ್‌ (6ಕ್ಕೆ 4) ಅವರ ದಾಳಿಗೆ ಎದುರಾಳಿ ತಂಡ ನಲುಗಿತು.

2019 ರಲ್ಲಿ ನಡೆದ ಕಾಂಟಿನೆಂಟಲ್‌ ಕಪ್‌ ಟೂರ್ನಿಯ ಪಂದ್ಯದಲ್ಲಿ ಟರ್ಕಿ ತಂಡ, ಜೆಕ್‌ ರಿಪಬ್ಲಿಕ್‌ ಎದುರು 21 ರನ್‌ಗಳಿಗೆ ಆಲೌಟಾಗಿದ್ದು, ವೃತ್ತಿಪರ ಟಿ20 ಕ್ರಿಕೆಟ್‌ನಲ್ಲಿ ಈ ಹಿಂದಿನದ ಕನಿಷ್ಠ ಮೊತ್ತ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT