ಸೋಮವಾರ, ಅಕ್ಟೋಬರ್ 19, 2020
24 °C

ಕ್ರಿಕೆಟಿಗ ವೆರ್ನಾನ್ ಫಿಲ್ಯಾಂಡರ್ ಸಹೋದರನ ಹತ್ಯೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ವೆರ್ನಾನ್ ಫಿಲ್ಯಾಂಡರ್ ಅವರ ತಮ್ಮ ಟೈರೊನ್ ಫಿಲ್ಯಾಂಡರ್‌ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ.

ಬುಧವಾರ ಟೈರೊನ್ ಅವರು ತಮ್ಮ ನೆರೆಮನೆಯವರಿಗೆ ನೀರು ಕೊಡಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ವರದಿ ಮಾಡಿವೆ.

‘ನಮ್ಮ ಕುಟುಂಬಕ್ಕೆ ಅಪಾರ  ಆಘಾತವಾಗಿದೆ. ಆದರೆ, ಈ ಕೊಲೆ ಮಾಡಿದವರ ಬಗ್ಗೆಯಾಗಲೀ, ಕಾರಣದ ಕುರಿತಾಗಲೀ ಗೊತ್ತಿಲ್ಲ. ಈ ಸಂದರ್ಭದಲ್ಲಂತೂ ನಮಗೆ ಏನೂ ಹೇಳುವುದೊಂದೇ ತಿಳಿಯುತ್ತಿಲ್ಲ’ ಎಂದು ವೆರ್ನಾನ್ ಹೇಳಿದ್ದಾರೆ.

ಘಟನೆ ನಡೆದ ಸಂದರ್ಭಧಲ್ಲಿ ವೆರ್ನಾನ್ ಅವರ ತಾಯಿ ಮತ್ತು ಕುಟುಂಬದ ಸದಸ್ಯರು ತಮ್ಮ ಮನೆಯ ಆವರಣದಲ್ಲಿಯೇ ಇದ್ದರು. ಗುಂಡು ಹಾರಿದ ಸದ್ದು ಕೇಳಿದ್ದರು. ಬುಧವಾರ ಮಧ್ಯಾಹ್ನ ಊಟದ ಸಮಯದಲ್ಲಿ ಈ ಘಟನೆ ನಡೆದಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆರ್ನಾನ್ 13 ವರ್ಷಗಳವರೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಆಡಿದ್ದರು. ಕೆಲವು ತಿಂಗಳುಗಳ ಹಿಂದೆ ಅವರು ನಿವೃತ್ತಿ ಘೋಷಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.