ಶುಕ್ರವಾರ, ಮೇ 14, 2021
27 °C
ಮುಂಬೈ ಇಂಡಿಯನ್ಸ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಮೆಚ್ಚುಗೆ

ಡೆತ್‌ ಓವರ್‌ಗಳಲ್ಲಿ ಬೂಮ್ರಾ ಪರಿಣಾಮಕಾರಿ: ಟ್ರೆಂಟ್ ಬೌಲ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಜಸ್‌ಪ್ರೀತ್ ಬೂಮ್ರಾ ಅವರು ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಬಲ್ಲ ಬೌಲರ್‌ಗಳಲ್ಲಿ ಒಬ್ಬರು ಎಂದು ಮುಂಬೈ ಇಂಡಿಯನ್ಸ್ ತಂಡದ ವೇಗಿ ಟ್ರೆಂಟ್‌ ಬೌಲ್ಟ್ ಅಭಿಪ್ರಾಯಪಟ್ಟಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್ ಎದುರು ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ಬೂಮ್ರಾ ನಾಲ್ಕು ಓವರ್‌ಗಳಲ್ಲಿ 14 ರನ್ ನೀಡಿ ಒಂದು ವಿಕೆಟ್ ಗಳಿಸಿದ್ದರು. ಇದರೊಂದಿಗೆ ಎದುರಾಳಿಯನ್ನು 137 ರನ್‌ಗಳಿಗೆ ಆಲೌಟ್‌ ಮಾಡಿದ್ದ ಮುಂಬೈ, 13 ರನ್‌ಗಳ ಜಯ ಸಾಧಿಸಿತ್ತು. ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ರೋಹಿತ್ ಶರ್ಮಾ ನಾಯಕತ್ವದ ತಂಡ 150 ರನ್ ಗಳಿಸಿತ್ತು.

ಸ್ಪಿನ್ನರ್ ರಾಹುಲ್ ಚಾಹರ್‌ (19ಕ್ಕೆ 3) ಹಾಗೂ ಬೌಲ್ಟ್‌ (28ಕ್ಕೆ 3) ಅವರು ಹೈದರಾಬಾದ್‌ನ ಬ್ಯಾಟಿಂಗ್‌ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘ಬೂಮ್ರಾ ಅವರ ಬೌಲಿಂಗ್ ನೋಡುವುದಕ್ಕೆ ಖುಷಿಯಾಗುತ್ತದೆ. ತಾನು ಏನು ಮಾಡುತ್ತಿದ್ದೇನೆ ಎಂಬುದಕ್ಕೆ ಅವರಿಗೆ ಸ್ಪಷ್ಟತೆಯಿದೆ. ಡೆತ್ ಓವರ್‌ ಸಂದರ್ಭದಲ್ಲಿ ಅವರ ಬೌಲಿಂಗ್ ಅತ್ಯುತ್ತಮವಾಗಿರುತ್ತದೆ. ಪಂದ್ಯದಲ್ಲಿ ನನ್ನ ಕಾರ್ಯವನ್ನು ಅವರು ಮತ್ತಷ್ಟು ಸರಳಗೊಳಿಸಿದರು‘ ಎಂದು ಬೌಲ್ಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು