ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಬೂಮ್ರಾ ಇನ್‌ಸ್ಟಾಗ್ರಾಂ ಸ್ಟೋರಿ

Published 28 ನವೆಂಬರ್ 2023, 15:58 IST
Last Updated 28 ನವೆಂಬರ್ 2023, 15:58 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಮಂಗಳವಾರ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ ಸಂದೇಶವೊಂದು ತೀವ್ರ ಕುತೂಹಲ ಮೂಡಿಸಿತು. 

‘ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರ’ ಎಂಬ ಸಂದೇಶವನ್ನು ಅವರು ತಮ್ಮ ಡಿ.ಪಿ (ಡಿಸ್‌ಪ್ಲೇ ಚಿತ್ರ)ಯೊಂದಿಗೆ ಪೋಸ್ಟ್ ಮಾಡಿದ್ದರು. ಇನ್ಸ್ಟಾಗ್ರಾಮ್ ಸ್ಟೋರಿಯ ಪೋಸ್ಟ್‌ಗಳು ಸಾಮಾನ್ಯವಾಗಿ 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಅಳಿಸಿಹೋಗುತ್ತವೆ.

ಬೂಮ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ವಿವಾದ, ಚರ್ಚೆಗಳಿಗೂ  ಆಸ್ಪದ ಕೊಟ್ಟಿದ್ದು ಕಡಿಮೆ. ಎಲ್ಲದಕ್ಕೂ ತಮ್ಮ ಬೌಲಿಂಗ್ ಸಾಧನೆಯ ಮೂಲಕವೇ ಉತ್ತರ ಕೊಟ್ಟವರು.

ಗಾಯ ಮತ್ತು ಶಸ್ತ್ರಚಿಕಿತ್ಸೆಯಿಂದಾಗಿ ಸುಮಾರು ಒಂದು ವರ್ಷ ಕ್ರಿಕೆಟ್‌ನಿಂದ ದೂರವಿದ್ದ ಅವರು ವಿಶ್ವಕಪ್‌ ಟೂರ್ನಿಗೂ ಒಂದು ತಿಂಗಳು ಮುನ್ನವಷ್ಟೇ ತಂಡಕ್ಕೆ ಮರಳಿದ್ದರು. ಗುಜರಾತ್ ಆಟಗಾರ ಬೂಮ್ರಾ  ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 11 ಪಂದ್ಯಗಳಿಂದ 20 ವಿಕೆಟ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT