ಕರಾಚಿ: ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಯಕ ಸ್ಥಾನದಿಂದ ಜೋಸ್ ಬಟ್ಲರ್ ಕೆಳಗಿಳಿದಿರುವುದು ಅಚ್ಚರಿ ಮೂಡಿಸಿದೆ.

ಆಫ್ಗಾನಿಸ್ತಾನ ವಿರುದ್ಧ ಬುಧವಾರ ನಡೆದ ರೋಚಕ ಪಂದ್ಯದಲ್ಲಿ 8 ರನ್ಗಳಿಂದ ಇಂಗ್ಲೆಂಡ್ ಪರಾಭವಗೊಂಡಿತು. ಈ ಸೋಲಿನ ಆಘಾತದಲ್ಲಿರುವ ಬಟ್ಲರ್, ‘ನಾಯಕ ಸ್ಥಾನದಿಂದ ಕೆಳಗಿಳಿದಿದ್ದು ನನ್ನ ಪಾಲಿಗೆ ಸರಿಯಾದ ನಿರ್ಧಾರ’ ಎಂದಿದ್ದಾರೆ.

‘ಎರಡು ಸೋಲುಗಳಿಂದ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಚಾಂಪಿಯನ್ಸ್ ಟ್ರೋಫಿ ನನ್ನ ಪಾಲಿಗೆ ಬಹುಮುಖ್ಯವಾಗಿತ್ತು. ಈ ಫಲಿತಾಂಶದ ಮೂಲಕ ನನ್ನ ನಾಯಕತ್ವದ ಹಾದಿ ಕೊನೆಗೊಂಡಂತಾಗಿದೆ. ಇದು ನಿಜಕ್ಕೂ ಅವಮಾನಕರ’ ಎಂದು ನೊಂದು ಹೇಳಿದ್ದಾರೆ.

2022ರ ಜೂನ್ನಲ್ಲಿ ಇಯಾನ್ ಮಾರ್ಗನ್ ಅವರ ನಿವೃತ್ತಿಯ ನಂತರ ಬಟ್ಲರ್ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡರು. ಆ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ತಂಡ ವಿಜಯಿಯಾಯಿತು. ಆದರೆ 2023ರಲ್ಲಿ ಏಕದಿನ ವಿಶ್ವಕಪ್ನಲ್ಲಿ ಆಫ್ಗಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಸೋಲುಂಡಿತು. ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿ ಅತಿಥ್ಯದಲ್ಲಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಸೆಮಿಫೈನಲ್ನಲ್ಲಿ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಸೋಲು ಕಂಡಿತು.

‘ನಾನು ಈಗ ತೆಗೆದುಕೊಂಡಿರುವ ನಿರ್ಧಾರ ತಂಡದ ಪಾಲಿಗೆ ಸರಿ ಇದೆ. ಕೋಚ್ ಬ್ರೆಂಡನ್ ಮೆಕ್ಕುಲಮ್ ಅವರೊಂದಿಗೆ ಕೈಜೋಡಿಸಿ, ಯಾರಾದರೂ ಸಮರ್ಥರು ತಂಡವನ್ನು ಜಯದ ಹಾದಿಗೆ ತರುವ ವಿಶ್ವಾಸವಿದೆ’ ಎಂದು ಬಟ್ಲರ್ ಹೇಳಿದ್ದಾರೆ.

ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು 44 ಏಕದಿನ ಪಂದ್ಯ ಆಡಿದೆ. ಇದರಲ್ಲಿ 18 ಗೆಲುವು, 25 ಸೋಲನ್ನು ತಂಡ ಕಂಡಿದೆ. 51 ಟಿ20 ಪಂದ್ಯಗಳಲ್ಲಿ 26 ಗೆಲುವು ಹಾಗೂ 22ರಲ್ಲಿ ಸೋಲುಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.