ಶುಕ್ರವಾರ, ಮೇ 14, 2021
25 °C
3ರಿಂದ ನಾಕೌಟ್‌ ಪಂದ್ಯಗಳು

ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿ: ಸೆಮಿಫೈನಲ್‌ನಲ್ಲಿ ಸಿಸಿಕೆ–ಬಿಎಸ್‌ಸಿ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಲೀಗ್‌ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ ‘ಎ’ ಮತ್ತು ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌ (ಬಿಎಸ್‌ಸಿ) ‘ಎ’ ತಂಡಗಳು, ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಇನ್ನೊಂದು ಸೆಮಿಫೈನಲ್‌ನಲ್ಲಿ ಧಾರವಾಡದ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಎ’ ಹಾಗೂ ಬೆಳಗಾವಿಯ ಅಮೃತ ಪೋತದಾರ ಸಿಸಿಐ ಪೈಪೋಟಿ ನಡೆಸಲಿವೆ. ಈ ಎರಡೂ ಪಂದ್ಯಗಳು ಏ. 3ರಂದು ನಡೆಯಲಿದ್ದು, 4ರಂದು ಫೈನಲ್‌ ಜರುಗಲಿದೆ.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನಿರ್ಣಾಯಕ ಲೀಗ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಿಎಸ್‌ಸಿ ‘ಎ’ ತಂಡ ಸ್ವಪ್ನಿಲ್‌ ಎಳವೆ (121) ಶತಕದ ಬಲದಿಂದ 49.4 ಓವರ್‌ಗಳಲ್ಲಿ 283 ರನ್‌ ಗಳಿಸಿತು. ಸವಾಲಿನ ಗುರಿಯ ಎದುರು ಉತ್ತಮ ಹೋರಾಟ ತೋರಿದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ 48.4 ಓವರ್‌ಗಳಲ್ಲಿ 269 ರನ್‌ ಗಳಿಸಿ ಗೆಲುವಿನ ಸನಿಹ ಬಂದು ಸೋಲು ಕಂಡಿತು.

ಇನ್ನೊಂದು ಪಂದ್ಯದಲ್ಲಿ ಬೆಳಗಾವಿಯ ಸಿಸಿಐ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 238 ರನ್ ಗಳಿಸಿತು. ಎದುರಾಳಿ ಎಸ್‌ಡಿಎಂ ಕ್ರಿಕೆಟ್‌ ಕ್ಲಬ್‌ ‘ಬಿ’ ತಂಡ 47.3 ಓವರ್‌ಗಳಲ್ಲಿ 212 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು.

ಟೈನಲ್ಲಿ ಅಂತ್ಯ: ನಗರದ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ (ಎಚ್‌ಎಸ್‌ಸಿ) ‘ಬಿ’ ಹಾಗೂ ಬೆಳಗಾವಿಯ ಯೂನಿಯನ್‌ ಜಿಮ್ಖಾನಾ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಕಂಡಿತು.

ಮೊದಲು ಬ್ಯಾಟ್‌ ಮಾಡಿದ ಎಚ್‌ಎಸ್‌ಸಿ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 346 ರನ್‌ ಗಳಿಸಿತ್ತು. ಜಿಮ್ಖಾನಾ ತಂಡ ಕೂಡ ನಿಗದಿತ ಓವರ್‌ಗಳಲ್ಲಿ ಇಷ್ಟೇ ರನ್‌ ಗಳಿಸಿ ಆಲೌಟ್ ಆಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಎರಡು ಅಂಕಗಳನ್ನು ಹಂಚಲಾಯಿತು. ಈ ಸಲದ ಟೂರ್ನಿಯಲ್ಲಿ ಟೈ ಆದ ಮೊದಲ ಪಂದ್ಯವಿದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು