ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಕಷನ್ ಬದಲೀ ಆಟಗಾರ ನಿಯಮಕ್ಕೆ ಗಾವಸ್ಕರ್ ಆಕ್ಷೇಪ

Last Updated 5 ಡಿಸೆಂಬರ್ 2020, 16:06 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಕಂಕಷನ್ ನಿಯಮದ ಪರಿಕಲ್ಪನೆಯ ಕುರಿತು ತಮಗೆ ತಕರಾರು ಇದೆ. ಬೌನ್ಸ್‌ರ್‌ಗಳನ್ನು ಎದುರಿಸುವಲ್ಲಿ ಅಸಮರ್ಥರಾಗುವ ಬ್ಯಾಟ್ಸ್‌ಮನ್‌ಗಳಿಗೆ ಇದು ನೆರವಾಗುತ್ತದೆ. ಬ್ಯಾಟ್ಸ್‌ಮನ್‌ಗಳ ಕೌಶಲ ಲೋಪವನ್ನು ಬೆಂಬಲಿಸುವುದಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದ್ದಾರೆ.

ಶುಕ್ರವಾರದ ಟಿ20 ಪಂದ್ಯದಲ್ಲಿ ಭಾರತದ ಆಟಗಾರ ರವೀಂದ್ರ ಜಡೇಜ ಅವರ ಹೆಲ್ಮೆಟ್‌ಗೆ ಬೌನ್ಸರ್‌ ಅಪ್ಪಳಿಸಿತ್ತು. ಆಗ ಫೀಲ್ಡಿಂಗ್ ಮಾಡಲು ಯಜುವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಲಾಗಿತ್ತು. ಅವರು ಬೌಲಿಂಗ್ ಮಾಡಿ ಮೂರು ವಿಕೆಟ್ ಕಬಳಿಸಿ, ಪಂದ್ಯಶ್ರೇಷ್ಠರಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಗಾವಸ್ಕರ್, ’ಚಾಹಲ್ ಅವರ ಆಯ್ಕೆ ನಿಯಮಕ್ಕೆ ಬದ್ಧವಾಗಿದೆ. ಅದರ ಬಗ್ಗೆ ಯಾವುದೇ ತಕರಾರು ನನಗಿಲ್ಲ. ಪಂದ್ಯ ರೆಫರಿಯಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ಬೂನ್ ಅವರೇ ಅದಕ್ಕೆ ಅನುಮತಿ ಕೊಟ್ಟಿದ್ದರು. ಚಾಹಲ್ ಕೂಡ ಬ್ಯಾಟಿಂಗ್‌ ಮಾಡುತ್ತಾರೆ. ಅವರು ಎಷ್ಟು ರನ್ ಹೊಡೆಯುತ್ತಾರೆನ್ನುವುದು ಮುಖ್ಯವಲ್ಲ. ಅವರೂ ಒಂದರ್ಥದಲ್ಲಿ ಆಲ್‌ರೌಂಡರ್‌ ಆಗುತ್ತಾರೆ‘ ಎಂದು ಇಂಡಿಯಾ ಟುಡೆಗೆ ಗಾವಸ್ಕರ್ ಹೇಳಿಕೆ ನೀಡಿದ್ದಾರೆ.

’ಬಹುಶಃ ನಾನು ಹಳೆಯ ಕಾಲದ ಯೋಚನಾಲಹರಿ ಉಳ್ಳವನಾಗಿರಬಹುದು. ಆದರೆ ಒಬ್ಬ ಬ್ಯಾಟ್ಸ್‌ಮನ್ ಬೌನ್ಸರ್ ಆಡಲು ಅಸಮರ್ಥನಾಗಿದ್ದರೆ, ಅದಕ್ಕೆ ತಂಡವು ಬದಲೀ ಆಟಗಾರನನ್ನು ಕೊಡುವುದು ಎಷ್ಟರ ಮಟ್ಟಿಗೆ ಸರಿ‘ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT