ಸೋಮವಾರ, ಫೆಬ್ರವರಿ 24, 2020
19 °C

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕಿಶನ್‌ ಎಸ್‌.ಬೆಡಾರೆ (53) ಮತ್ತು ಎಸ್‌.ಎಸ್‌.ಸಟೇರಿ (ಬ್ಯಾಟಿಂಗ್ 53) ಅವರ ಅರ್ಧ ಶತಕಗಳ ನೆರವಿನಿಂದ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಲೀಗ್‌ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಎರಡನೇ ದಿನ ಮೇಲುಗೈ ಸಾಧಿಸಿತು.

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಹೈದರಾಬಾದ್‌ನ 202 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ಗುರುವಾರ 5 ವಿಕೆಟ್‌ಗೆ 230 ರನ್‌ಗಳೊಡನೆ ದಿನದಾಟ ಪೂರೈಸಿದೆ.

ಒಂದು ಹಂತದಲ್ಲಿ 101 ರನ್‌ಗಳಾಗುಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ ಇವರಿಬ್ಬರ ನಡುವಣ 94 ರನ್‌ಗಳ ಐದನೇ ವಿಕೆಟ್‌ ಜೊತೆಯಾಟದಿಂದ ಚೇತರಿಸಿಕೊಂಡಿತು. ಸಟೇರಿ ಜೊತೆ ಎಗಡೈ ಆಟಗಾರ ಮನೋಜ್‌ ಭಾಂಡಗೆ (ಬ್ಯಾಟಿಂಗ್‌ 23) ಶುಕ್ರವಾರ ಆಟ ಮುಂದುವರಿಸುವರು. ಪ್ರವಾಸಿ ತಂಡ ಕಡೆ ಮಧ್ಯಮ ವೇಗಿ ಅಜಯ್‌ ದೇವ್‌ ಗೌಡ ಮೂರು ವಿಕೆಟ್‌ ಪಡೆದು ಯಶಸ್ವಿ ಎನಿಸಿದರು.

ಸ್ಕೋರುಗಳು: ಹೈದರಾಬಾದ್‌: 1ನೇ ಇನಿಂಗ್ಸ್‌: 202; ಕರ್ನಾಟಕ: 1ನೇ ಇನಿಂಗ್ಸ್‌: 96 ಓವರುಗಳಲ್ಲಿ 5 ವಿಕೆಟ್‌ಗೆ 230 (ಅಂಕಿತ್‌ ಉಡುಪ 28, ಬಿ.ಯು.ಶಿವಕುಮಾರ್‌ 42, ಕಿಶನ್‌ ಎಸ್‌.ಬೆಡಾರೆ 53, ಎಸ್‌.ಎಸ್‌.ಸಟೇರಿ ಬ್ಯಾಟಿಂಗ್ 53, ಮನೋಜ್‌ ಎಸ್‌.ಭಾಂಡಗೆ ಬ್ಯಾಟಿಂಗ್‌ 23; ಅಜಯ್‌ ದೇವ್‌ ಗೌಡ 32ಕ್ಕೆ3).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು