ಮೈಸೂರು: ಮಯಂಕ್ ವರ್ಮಾ ಅಜೇಯ ಶತಕದ ನೆರವಿನಿಂದ (164 ರನ್; 233 ಎ, 4X15, 6X1) ಛತ್ತೀಸಗಢ ತಂಡವು ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಕರ್ನಾಟಕ ಎದುರು ಮೊದಲ ಇನಿಂಗ್ಸ್ನಲ್ಲಿ 303 ರನ್ ಕಲೆ ಹಾಕಿತು. ಭಾನುವಾರ ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡವು ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದೆ.

ಇಲ್ಲಿನ ಎಸ್ಡಿಎನ್ಆರ್ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಛತ್ತೀಸಗಢಕ್ಕೆ ವಿಕೆಟ್ ಕೀಪರ್ ಮಯಂಕ್ ಹಾಗೂ ಶೋಬಿತ್ ಶರ್ಮಾ 87 ರನ್ಗಳ ಉತ್ತಮ ಆರಂಭಿಕ ಜೊತೆಯಾಟವಾಡಿದರು. ಆದರೆ, ಬಳಿಕ ಕರ್ನಾಟಕದ ಬೌಲರ್ಗಳು ಎದುರಾಳಿಗಳನ್ನು ನಿಯಂತ್ರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಪ್ರತೀಕ್ ಜಚಕ್ (53) ಬಿಟ್ಟರೆ ಉಳಿದವರು ಯಶಸ್ವಿಯಾಗಲಿಲ್ಲ.

ಕರ್ನಾಟಕದ ಬೌಲರ್ಗಳಾದ ಕೆ.ಪಿ. ಕಾರ್ತಿಕೇಯ, ಧ್ರುವ್ ಪ್ರಭಾಕರ್, ಹಾರ್ದಿಕ್ ರಾಜ್ ಹಾಗೂ ಕೆ. ಶಶಿಕುಮಾರ್ ತಲಾ ಎರಡು ವಿಕೆಟ್ ಪಡೆದರೆ, ಸಮಿತ್ ದ್ರಾವಿಡ್ ಒಂದು ವಿಕೆಟ್ ಉರುಳಿಸಿದರು.

ಕರ್ನಾಟಕ ಪರ ಇನಿಂಗ್ಸ್ ಆರಂಭಿಸಿದ ಇ.ಜೆ. ಜಾಸ್ಪರ್ (ಔಟಾಗದೇ 1) ಹಾಗೂ ಪ್ರಖರ್ ಚತುರ್ವೇದಿ (ಔಟಾಗದೇ 16) ಸೋಮವಾರಕ್ಕೆ ಆಟ ಕಾಯ್ದುಕೊಂಡರು.

ಸಂಕ್ಷಿಪ್ತ ಸ್ಕೋರ್:

ಛತ್ತೀಸಗಢ: 83 ಓವರ್ಗಳಲ್ಲಿ 303 (ಮಯಂಕ್ ವರ್ಮಾ ಔಟಾಗದೇ 164, ಪ್ರಥಮ್ ಜಚಕ್ 53. ಕೆ.ಪಿ. ಕಾರ್ತಿಕೇಯ 34ಕ್ಕೆ 2, ಧ್ರುವ್ ಪ್ರಭಾಕರ್ 45ಕ್ಕೆ 2, ಹಾರ್ದಿಕ್ ರಾಜ್ 83ಕ್ಕೆ 2, ಕೆ. ಶಶಿಕುಮಾರ್ 93ಕ್ಕೆ 2).

ಕರ್ನಾಟಕ: 5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 17 (ಪ್ರಖರ್ ಚತುರ್ವೇದಿ ಔಟಾಗದೇ 16, ಇ.ಜೆ.ಜಾಸ್ಪರ್ ಔಟಾಗದೇ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.