ಶನಿವಾರ, ಆಗಸ್ಟ್ 8, 2020
23 °C
ಡೆಲ್ಲಿ ಕ್ಯಾಪಿಟಲ್ಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್ ಮಲ್ಹೋತ್ರಾ

ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಐಪಿಎಲ್‌: ಫ್ಯಾಂಟಸಿ ಸ್ಪೋರ್ಟ್ಸ್‌ಗೆ ಲಾಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಪಂದ್ಯಗಳನ್ನು ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆದರೆ ಫ್ಯಾಂಟಸಿ ಸ್ಪೋರ್ಟ್ಸ್‌ಗೆ ಉತ್ತಮ ಲಾಭವಾಗಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್ ಮಲ್ಹೋತ್ರಾ ಹೇಳಿದ್ದಾರೆ.

’ಪ್ರೇಕ್ಷಕರು ಪಂದ್ಯಗಳನ್ನು ನೋಡಲು ಕ್ರೀಡಾಂಗಣಗಳಿಗೆ ಹೋಗುವುದಿಲ್ಲವೆಂದರೆ,  ಟಿವಿ ಅಥವಾ  ಆನ್‌ಲೈನ್‌ನಲ್ಲಿ ನೋಡುವುದು ಖಚಿತ. ಇದರಿಂದಾಗಿ ಇಷ್ಟು ವರ್ಷ ಕ್ರಿಕೆಟ್‌ನಲ್ಲಿ ಅಷ್ಟಕ್ಕಷ್ಟೇ ಆಸಕ್ತಿ ಇರುವವರನ್ನು ಕೂಡ ಈ ಸಂದರ್ಭದಲ್ಲಿ ಸೆಳೆಯಬಹುದು‘ ಎಂದು ಧೀರಜ್, ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್‌ ಫೆಡರೇಷನ್ (ಎಫ್‌ಐಎಫ್‌ಎಸ್)  ಆಯೋಜಿಸಿದ್ದ ಸಂವಾದದಲ್ಲಿ ಹೇಳಿದರು.

ಮಾರುಕಟ್ಟೆಯಲ್ಲಿ ಫ್ಯಾಂಟಸಿ ಸ್ಪೋರ್ಟ್ಸ್‌ಗೆ ಅಪಾರ ಬೇಡಿಕೆ ವ್ಯಕ್ತವಾಗುತ್ತಿದೆ. ಆನ್‌ಲೈನ್‌ ಫ್ಯಾಂಟಸಿ ಸ್ಪೋರ್ಟ್ಸ್‌ ಬಳಕೆದಾರರಲ್ಲಿ ಶೇ 77ರಷ್ಟು ಮಂದಿ ಕ್ರಿಕೆಟ್ ಮತ್ತು ಶೇ47ರಷ್ಟು ಮಂದಿ ಕಬಡ್ಡಿ ಆಡುತ್ತಾರೆ ಎಂದು ಈಚೆಗೆ ಕೆಪಿಎಂಜಿಯೊಂದಿಗೆ ಫ್ಯಾಂಟಸಿ ನಡೆಸಿರುವ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಸಂದರ್ಭದಲ್ಲಿ ಸಮೀಕ್ಷಾ ವರದಿಯನ್ನೂ ಬಿಡುಗಡೆ ಮಾಡಲಾಯಿತು.

ಈ ವರದಿಯ ಪ್ರಕಾರ, 2020ರಲ್ಲಿ ಒಟ್ಟು ಆದಾಯ ₹ 2400 ಕೋಟಿ ದಾಡಲಿದೆ. 2019ರಲ್ಲಿ ₹ 920 ಕೋಟಿ ಆದಾಯ ಗಳಿಸಲಾಗಿತ್ತು. ಭಾರತದಲ್ಲಿ ಇದು ಬಹಳಷ್ಟು ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು