ಬುಧವಾರ, ಜನವರಿ 29, 2020
30 °C

ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ ಪೈಪೋಟಿ!

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ:  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ನಡುವೆ ಈಗ ರೋಚಕ ಪೈಪೋಟಿ ನಡೆಯುತ್ತಿದೆ.

ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಸ್ಥಾನಕ್ಕೆ ಲಗ್ಗೆ ಹಾಕುವ ಹಣಾಹಣಿ ಅದು. ಈ ಪಟ್ಟಿಯಲ್ಲಿ ಒಂದು ತಿಂಗಳ ಹಿಂದೆ ಅಗ್ರಸ್ಥಾನಕ್ಕೆ  ಏರಿದ್ದ ರೋಹಿತ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಕೊಹ್ಲಿ ಒಂದು ರನ್‌ ಅಂತರದಿಂದ ಹಿಂದಿಕ್ಕಿದ್ದರು.

ಆದ್ದರಿಂದ ಬುಧವಾರದ ಪಂದ್ಯದ ಮುಕ್ತಾಯದ ಹೊತ್ತಿಗೆ ಈ ಪಟ್ಟಿಯಲ್ಲಿ ವಿರಾಟ್ ಅಥವಾ ರೋಹಿತ್ ಅವರಲ್ಲಿ ಯಾರು ಅಗ್ರಸ್ಥಾನದಲ್ಲಿರುತ್ತಾರೆಂದು ಕಾದು ನೋಡಬೇಕು. ವಿರಾಟ್ 69 ಪಂದ್ಯಗಳಿಂದ 2563 ರನ್‌ ಗಳಿಸಿದ್ದಾರೆ. ರೋಹಿತ್ 95 ಪಂದ್ಯಗಳನ್ನು ಆಡಿ 2562 ರನ್‌ ಪೇರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು