ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಖರ್, ಕಾರ್ತಿಕೇಯ ಶತಕ: ಕರ್ನಾಟಕಕ್ಕೆ 128 ರನ್‌ ಮುನ್ನಡೆ

ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ
Published 2 ಡಿಸೆಂಬರ್ 2023, 19:08 IST
Last Updated 2 ಡಿಸೆಂಬರ್ 2023, 19:08 IST
ಅಕ್ಷರ ಗಾತ್ರ

ಮೈಸೂರು: ಪ್ರಖರ್ ಚತುರ್ವೇದಿ (158) ಹಾಗೂ ಕೆ.ಪಿ. ಕಾರ್ತಿಕೇಯ (121) ಅವರ ಅಮೋಘ ಶತಕಗಳ ನೆರವಿನಿಂದ ಆತಿಥೇಯ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಎರಡನೇ ದಿನವಾದ ಶನಿವಾರ ಉತ್ತರಾಖಂಡ ವಿರುದ್ಧ ಹಿಡಿತ ಸಾಧಿಸಿತು.

ಉತ್ತರಾಖಂಡದ  232 ರನ್‌ಗಳಿಗೆ ಉತ್ತರವಾಗಿ ದಿನದಾಟ ಮುಗಿದಾಗ ಕರ್ನಾಟಕ 87 ಓವರುಗಳಲ್ಲಿ 5 ವಿಕೆಟ್‌ಗೆ 360 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಈಗಾಗಲೇ 128 ರನ್‌ಗಳ ಮುನ್ನಡೆ ಪಡೆದಿದೆ.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ಎರಡು ವಿಕೆಟ್‌ ಬೇಗನೇ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಂತರ ಜೊತೆಯಾದ ಪ್ರಖರ್ ಮತ್ತು ಕಾರ್ತಿಕೇಯ ಜೋಡಿ ಮೂರನೇ ವಿಕೆಟ್‌ಗೆ 278 ರನ್ ಜೊತೆಯಾಟದ ಮೂಲಕ ಕರ್ನಾಟಕಕ್ಕೆ ಮೇಲುಗೈ ಒದಗಿಸಿತು.

ದಿನದ ಅಂತ್ಯಕ್ಕೆ ಸಮಿತ್‌ ದ್ರಾವಿಡ್ (17) ಹಾಗೂ ಧೀರಜ್ ಗೌಡ (15) ಅಜೇಯರಾಗುಳಿದಿದ್ದರು.

ಸಂಕ್ಷಿಪ್ತ ಸ್ಕೋರ್‌

ಉತ್ತರಾಖಂಡ: 90.1 ಓವರ್‌ಗಳಲ್ಲಿ 232

ಕರ್ನಾಟಕ: 87 ಓವರ್‌ಗಳಲ್ಲಿ 5 ವಿಕೆಟ್‌ಗೆ 360ಕ್ಕೆ (ಪ್ರಖರ್ ಚತುರ್ವೇದಿ 158, ಕೆ.ಪಿ. ಕಾರ್ತಿಕೇಯ 128; ಕೃಷ್ಣ ಗಾರ್ಗ್‌ 61ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT