ಶನಿವಾರ, ಜುಲೈ 31, 2021
28 °C

ಕೋವಿಡ್ ಭೀತಿ: ಇಂಗ್ಲೆಂಡ್ ಕ್ರಿಕೆಟಿಗರು ಶ್ರೀಲಂಕಾದಿಂದ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಕ್ಕೆ ತೆರಳಿದ್ದ ತನ್ನ ಆಟಗಾರರನ್ನು ವಾಪಸ್‌ ಕರೆಸಿಕೊಳ್ಳುವುದಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಶುಕ್ರವಾರ ಘೋಷಿಸಿದೆ.

ಕೋವಿಡ್–19 ವೈರಸ್‌ ಭೀತಿಯಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಇಂಗ್ಲೆಂಡ್‌ ಮಂಡಳಿ ತಿಳಿಸಿದ್ದು, ಉಭಯ ತಂಡಗಳು ಶ್ರೀಲಂಕಾದ ಗಾಲೆ ಮತ್ತು ಕೊಲಂಬೊದಲ್ಲಿ ಕಣಕ್ಕಿಳಿಯಬೇಕಿತ್ತು.

‘ಕೋವಿಡ್‌–19 ವೈರಸ್‌ ಪ್ರಪಂಚದಾದ್ಯಂತ ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಜೊತೆ ಚರ್ಚಿಸಿ ನಮ್ಮ ಆಟಗಾರರನನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದೇವೆ. ಟೆಸ್ಟ್‌ ಸರಣಿಯನ್ನು ಮುಂದೂಡಲಾಗಿದೆ’ ಎಂದು ಇಸಿಬಿ ಪ್ರಕಟಣೆ ಹೊರಡಿಸಿದೆ.

‘ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಮಾನಸಿನ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಮ್ಮ ತಂಡವನ್ನು ಸಾಧ್ಯವಾದಷ್ಟು ಬೇಗನೆ ವಾಪಸ್ ಕರೆಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ಇದು ಕ್ರಿಕೆಟ್‌ ಅನ್ನು ಮೀರಿದ ಕ್ರಮವಾಗಿದೆ’ ಎಂದು ಉಲ್ಲೇಖಿಸಿದೆ.

‘ಇಂತಹ ಸಂದರ್ಭದಲ್ಲಿ ನಮಗೆ ಎಲ್ಲ ರೀತಿಯ ಸಹಕಾರ ನೀಡಿದ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ಟೂರ್ನಿಯನ್ನು ಪೂರ್ಣಗೊಳಿಸಲು ಸಾಧ್ಯವಾದಷ್ಟು ಬೇಗನೆ ಶ್ರೀಲಂಕಾಕ್ಕೆ ಪ್ರಯಾಣ ಬೆಳಸಲಿದ್ದೇವೆ’ ಎಂದೂ ತಿಳಿಸಿದೆ.

ಟೆಸ್ಟ್‌ ಸರಣಿಗೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದ ಲಂಕಾ ಮತ್ತು ಇಂಗ್ಲೆಂಡ್‌, ಇದೇ ತಿಂಗಳು 19 ರಿಂದ 23ರ ವರೆಗೆ ಹಾಗೂ 27 ರಿಂದ 31ರ ವರೆಗೆ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಬೇಕಿತ್ತು. ಅಭ್ಯಾಸ ಪಂದ್ಯಗಳು ಡ್ರಾನಲ್ಲಿ ಮುಕ್ತಾಯವಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು