ಶುಕ್ರವಾರ, ಏಪ್ರಿಲ್ 10, 2020
19 °C

ಐಸಿಸಿ ಟಿ20 ವಿಶ್ವಕಪ್ | ನಾಕೌಟ್ ಪಂದ್ಯಗಳಿಗೆ ಮೀಸಲು ದಿನಕ್ಕಾಗಿ ಆಸಿಸ್ ಬೇಡಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮೆಲ್ಬೋರ್ನ್‌: ಇದೇ ವರ್ಷ ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿ ವೇಳೆ ನಾಕೌಟ್‌ ಪಂದ್ಯಗಳನ್ನು ನಿಗದಿತ ದಿನದಂದು ನಡೆಸಲು ಆಗದಿದ್ದರೆ, ಮೀಸಲು ದಿನದಂದು ಆಡಿಸಲು ಅವಕಾಶ ನೀಡಬೇಕು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಐಸಿಸಿಗೆ ಮನವಿ ಮಾಡಲು ಮಂದಾಗಿದೆ.

ಇತ್ತಿಚೆಗೆ ಮುಕ್ತಾಯವಾದ ಮಹಿಳಾ ವಿಶ್ವಕಪ್‌ ಟೂರ್ನಿಯ ವೇಳೆ ಮೊದಲ ಸೆಮಿಫೈನಲ್ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಆ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಬೇಕಿತ್ತು. ಗುಂಪು ಹಂತದಲ್ಲಿ ಹೆಚ್ಚು ಅಂಕ ಹೊಂದಿದ್ದ ಕಾರಣ ಭಾರತಕ್ಕೆ ಫೈನಲ್ ಟಿಕೆಟ್‌ ನೀಡಲಾಗಿತ್ತು.

ಇದನ್ನು ಗಮನದಲ್ಲಿರಿಸಿ ಕ್ರಿಕೆಟ್‌ ಆಸ್ಟ್ರೇಲಿಯಾ ಈ ನಿರ್ಧಾರ ಕೈಗೊಂಡಿದೆ. ಐಸಿಸಿ ನಿಯಮಗಳ ಪ್ರಕಾರ ಫೈನಲ್‌ ಪಂದ್ಯಗಳಿಗಷ್ಟೇ ಮೀಸಲು ದಿನ ನಿಗದಿ ನೀಡಲಾಗುತ್ತದೆ.

ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯಗಳನ್ನು ನವೆಂಬರ್‌ 11 ಮತ್ತು 12ಕ್ಕೆ ನಡೆಸಲು ಉದ್ದೇಶಿಸಲಾಗಿದೆ. ಈ ಪಂದ್ಯಗಳಿಗೆ ಮೀಸಲು ದಿನ ನಿಗದಿಯಾಗಿಲ್ಲ. ಫೈನಲ್‌ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್‌ ಮೈದಾನದಲ್ಲಿ ನವೆಂಬರ್‌ 15 ರಂದು ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು