ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಗೆಲುವಿಗೆ 149 ರನ್‌ ಗುರಿ: ಪ್ರವಾಸಿ ಪಡೆಗೆ ಆರಂಭಿಕ ಆಘಾತ ನೀಡಿದ ಭಾರತ

Last Updated 3 ನವೆಂಬರ್ 2019, 15:31 IST
ಅಕ್ಷರ ಗಾತ್ರ

ನವದೆಹಲಿ:ಬಾಂಗ್ಲಾದೇಶ ತಂಡದ ಎದುರಿನ ಮೊದಲ ಟಿ–20 ಪಂದ್ಯದಲ್ಲಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 148 ರನ್‌ ಕಲೆ ಹಾಕಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಲ್ಲಿನಫಿರೋಜ್‌ ಷಾ ಕೋಟ್ಲಾದ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ,ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ಹೊತ್ತಿರುವ ರೋಹಿತ್‌ ಶರ್ಮಾ ಬಳಗದ ಆರಂಭ ಚೆನ್ನಾಗಿರಲಿಲ್ಲ. ರೋಹಿತ್‌ ಕೇವಲ 9ರನ್‌ ಗಳಿಸಿ ಔಟಾದರೆ, ಕನ್ನಡಿಗ ಕೆ.ಎಲ್‌. ರಾಹುಲ್‌ 15 ರನ್‌ ಗಳಿಗೆ ಪೆವಿಲಿಯನ್‌ ಹಾದಿ ಹಿಡಿದರು.

ಆರಂಭಿಕ ಆಟಗಾರ ಶಿಖರ್‌ ಧವನ್‌(41) ಹೊರತು ಪಡಿಸಿ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ವಿಫಲವಾದರು. ಕೊನೆಯಲ್ಲಿ ಬೀಸಾಟವಾಡಿದ ಕೃಣಾಲ್‌ ಪಾಂಡ್ಯ ಹಾಗು ವಾಷಿಂಗ್ಟನ್‌ ಸುಂದರ್‌ ಏಳನೇ ವಿಕೆಟ್‌ ಜೊತೆಯಾಟದಲ್ಲಿ ಕೇವಲ 10 ಎಸೆತಗಳಲ್ಲಿ 28ರನ್‌ ದೋಚಿದರು. ಇದರಿಂದಾಗಿ ತಂಡದ ಮೊತ್ತು 150ರ ಸಮೀಪಕ್ಕೇರಿತು.

ಬಾಂಗ್ಲಾ ಪರ ಶಫಿವುಲ್ಲಾ ಇಸ್ಲಾಂ ಮತ್ತು ಅಮಿನುಲ್‌ಇಸ್ಲಾಂ ತಲಾ ಎರಡು ವಿಕೆಟ್‌ ಪಡೆದರೆ,ಅಫೀಫ್‌ ಹೊಸೈನ್‌ ಒಂದು ವಿಕೆಟ್‌ ಪಡೆದರು. ಇದೀಗ ಬ್ಯಾಟಿಂಗ್‌ ಆರಂಭಿಸಿರುವ ಬಾಂಗ್ಲಾ ಎರಡುಓವರ್‌ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 13 ರನ್‌ ಗಳಿಸಿ ಆಡುತ್ತಿದೆ. 4 ಎಸೆತಗಳಲ್ಲಿ 7 ರನ್‌ ಗಳಿಸಿದ್ದ ಲಿಟನ್‌ ದಾಸ್‌ ದೀಪಕ್‌ ಚಾಹರ್‌ ಬೌಲಿಂಗ್‌ನಲ್ಲಿ ವಿಕೆಟ್ ರಾಹಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

ಬಾಂಗ್ಲಾ ವಿರುದ್ಧ ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಭಾರತ, ಅಜೇಯ ಗೆಲುವಿನ ದಾಖಲೆ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT