ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, ‘ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರಿಗೆ ಜನವರಿ 11, 2019ರಂದು ವಿಧಿಸಲಾಗಿದ್ದ ಅಮಾನತುಆದೇಶವನ್ನು ಒಂಬುಡ್ಸ್‌ಮನ್ ತೀರ್ಮಾನದವರೆಗೆ ಹಿಂಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ಪಿ.ಎಸ್. ನರಸಿಂಹ ಅವರ ಸಮ್ಮತಿಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ’ ಎಂದು ತಿಳಿಸಿದೆ.