ಬುಧವಾರ, ನವೆಂಬರ್ 25, 2020
22 °C

ಕ್ರಿಕೆಟ್: ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆ.ವಿ. ಸಿದ್ಧಾರ್ಥ್ ಅವರ ಅಬ್ಬೆದ ಶತಕದ ಬಲದಿಂದ ಕೆನರಾ ಬ್ಯಾಂಕ್ ತಂಡವು ಕೆಎಸ್‌ಸಿಎ ದ್ವಿತಿಯ ಗುಂಪಿನ ಮೊದಲ ಡಿವಿಷನ್ ಲೀಗ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಕೆನರಾ ಬ್ಯಾಂಕ್ ತಂಡವು 148 ರನ್‌ಗಳಿಂದ ಡಿಟಿಡಿಸಿ ಸ್ಪೋರ್ಟ್ಸ್‌ ಕ್ಲಬ್ ವಿರುದ್ಧ ಜಯಿಸಿತು.  ಮಾರ್ಚ್‌ನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಮುಂದೂಡಲಾಗಿತ್ತು.

ಸಂಕ್ಷಿಪ್ತ ಸ್ಕೋರ್:  ಕೆನರಾ ಬ್ಯಾಂಕ್: 50 ಓವರ್‌ಗಳಲ್ಲಿ 295 (ಭರತ್ ಚಿಪ್ಲಿ 29, ಕೆ.ವಿ. ಸಿದ್ಧಾರ್ಥ್ 103, ಕೆ.ಬಿ. ಪವನ್ 29, ದೇವಯ್ಯ 54ಕ್ಕೆ2, ಅವಿನಾಶ್ 21ಕ್ಕೆ2, ಆನಂದ ದೊಡ್ಡಮನಿ 62ಕ್ಕೆ2, ಪ್ರವೀಣ ದುಬೆ 45ಕ್ಕೆ2), ಡಿಟಿಡಿಸಿ: 29.1 ಓವರ್‌ಗಳಲ್ಲಿ 147 (ಅಭಿಷೇಕ್ ರೆಡ್ಡಿ 37, ಪ್ರಶಾಂತ್ 30, ಅವಿನಾಶ್ 39, ಮನೋಜ್ ಭಾಂಡಗೆ 17ಕ್ಕೆ2, ರಾಜೂ ಭಟ್ಕಳ 16ಕ್ಕೆ3, ಮೊಹಮ್ಮದ್ ಸೈಫ್ 18ಕ್ಕೆ2) ಫಲಿತಾಂಶ: ಕೆನರಾ ಬ್ಯಾಂಕ್ ತಂಡಕ್ಕೆ 148 ರನ್‌ಗಳ ಜಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು