ಬುಧವಾರ, ಮಾರ್ಚ್ 29, 2023
23 °C

ಕ್ರಿಕೆಟ್‌: ಗಗನ್ ಸಾಯಿ ತ್ರಿಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಗನ್ ಸಾಯಿ ಕೆ. ಗಳಿಸಿದ ಅಮೋಘ ತ್ರಿಶತಕದ ಬಲದಿಂದ ಗಿರಿಧನ್ವ ಸ್ಕೂಲ್‌ ತಂಡವು ಬಿಟಿಆರ್‌ ಶೀಲ್ಡ್‌ 14 ವರ್ಷದೊಳಗಿನವರ ಒಂದನೇ ಗುಂಪು ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.

ಇಲ್ಲಿ ನಡೆದ ಪಂದ್ಯದಲ್ಲಿ ಗಿರಿಧನ್ವ 534 ರನ್‌ಗಳಿಂದ ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ಗಿರಿಧನ್ವ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 603 ರನ್ ಗಳಿಸಿತು. 150 ಎಸೆತಗಳನ್ನು ಎದುರಿಸಿದ ಗಗನ್‌ 59 ಬೌಂಡರಿ 10 ಸಿಕ್ಸರ್ ಸಿಡಿಸಿದರು. ಫ್ಲಾರೆನ್ಸ್ 16.4 ಓವರ್‌ಗಳಲ್ಲಿ 69 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್: ಗಿರಿಧನ್ವ ಸ್ಕೂಲ್‌: 50 ಓವರ್‌ಗಳಲ್ಲಿ 5ಕ್ಕೆ 603 (ಶಿವು ಎಂ. 36, ಗಗನ್ ಸಾಯಿ 344, ರೋಹಿತ್ ಸಾಯಿ ಕೇಟಿರೆಡ್ಡಿ ಔಟಾಗದೆ 95; ಅರ್ಜುನ್ ಬಾಲು 73ಕ್ಕೆ 2). ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್‌: 16.4 ಓವರ್‌ಗಳಲ್ಲಿ 69 (ಶಿವು ಎಂ. 15ಕ್ಕೆ 5, ಸಾತ್ವಿಕ್ ಮಹೇಂದ್ರ 21ಕ್ಕೆ 3). ಫಲಿತಾಂಶ: ಗಿರಿಧನ್ವ ಸ್ಕೂಲ್‌ ತಂಡಕ್ಕೆ 534 ರನ್‌ಗಳ ಜಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು