ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಓವರ್‌ಗಳಲ್ಲಿ 10 ರನ್‌, 8 ವಿಕೆಟ್: 2 ದಶಕದ ಹಿಂದಿನ ವಿಶ್ವ ದಾಖಲೆ ಮುರಿದ ನದೀಂ

ಲಿಸ್ಟ್‌ ಎ ಕ್ರಿಕೆಟ್‌
Last Updated 20 ಸೆಪ್ಟೆಂಬರ್ 2018, 11:28 IST
ಅಕ್ಷರ ಗಾತ್ರ

ಚೆನ್ನೈ: ಜಾರ್ಖಂಡ್‌ ತಂಡದ ಎಡಗೈ ಸ್ಪಿನ್ನರ್‌ ಶಾಬಾಜ್ ನದೀಂ ಅವರುವಿಜಯ್‌ ಹಜಾರೆ ಕ್ರಿಕೆಟ್‌ ಪಂದ್ಯಾವಳಿಯ ರಾಜಸ್ತಾನ ಎದುರಿನ ಪಂದ್ಯದಲ್ಲಿ ಕೇವಲ 10 ರನ್‌ ನೀಡಿ 8 ವಿಕೆಟ್‌ ಉರುಳಿಸುವ ಮೂಲಕ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದರಾಜಸ್ತಾನ ಮೊದಲು ಬ್ಯಾಟಿಂಗ್‌ ಮಾಡಿತು. ನದೀಂ ಅವರ ಅತ್ಯುತ್ತಮ ಬೌಲಿಂಗ್‌ ಎದುರು ಕಂಗೆಟ್ಟ ಆ ತಂಡ28.3 ಓವರ್‌ಗಳಲ್ಲಿ ಕೇವಲ 73ರನ್‌ ಗಳಿಸಿ ಆಲೌಟ್‌ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಜಾರ್ಖಂಡ್‌ 14.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 76 ರನ್‌ ಗಳಿಸಿ ಸುಲಭ ಜಯ ಸಾಧಿಸಿತು.

ಒಟ್ಟು 10 ಓವರ್‌ ಎಸೆದ ನದೀಂ 4 ಓವರ್‌ ಮೇಡನ್‌ನೊಂದಿಗೆ ಕೇವಲ 10 ರನ್‌ ಬಿಟ್ಟುಕೊಟ್ಟು, 8 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ನಿರ್ವಹಣೆಯೊಂದಿಗೆ ಎರಡುದಶಕಗಳ ಹಿಂದಿನ ವಿಶ್ವದಾಖಲೆಯನ್ನು ಮುರಿದರು. ಇದಕ್ಕೂ ಮೊದಲು ಈ ದಾಖಲೆ ಭಾರತದವರೇ ಆದ ರಾಹುಲ್ ಸಂಘ್ವಿ ಅವರ ಹೆಸರಿನಲ್ಲಿತ್ತು.

1997–98ರಲ್ಲಿ ದೆಹಲಿ ತಂಡದ ಪರ ಆಡಿದ್ದಸಂಘ್ವಿ , ಹಿಮಾಚಲ ಪ್ರದೇಶದೆದುರು 15 ರನ್‌ ನೀಡಿ 8 ವಿಕೆಟ್‌ ಪಡೆದಿದ್ದರು.

ಜಾರ್ಖಂಡ್‌ ಪರ ಕ್ರಿಕೆಟ್‌ನಮೂರೂ ಮಾದರಿಯ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ29 ವರ್ಷದ ನದೀಂ ಇದುವರೆಗೆ 99 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 29.74ರ ಸರಾಸರಿಯಲ್ಲಿ 374 ವಿಕೆಟ್‌ ಗಳಿಸಿದ್ದಾರೆ. ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ 87 ಹಾಗೂ ಟಿ20ಯಲ್ಲಿ 109 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 124, 89 ವಿಕೆಟ್‌ ಉರುಳಿಸಿದ್ದಾರೆ.

**

ಲಿಸ್ಟ್‌ ‘ಎ’/ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿಅಗ್ರ ಐವರು ಬೌಲರ್‌ಗಳ ಸಾಧನೆ

ಆಟಗಾರ ವಿಕೆಟ್ ತಂಡ ಎದುರಾಳಿ
ಶಾಬಾಜ್ ನದೀಂ 10ಕ್ಕೆ8 ಜಾರ್ಖಂಡ್ ರಾಜಸ್ಥಾನ್
ರಾಹುಲ್ ಸಂಘ್ವಿ 15ಕ್ಕೆ8 ದೆಹಲಿ ಹಿಮಾಚಲಪ್ರದೇಶ
ಚಮಿಂದಾ ವಾಸ್ 19ಕ್ಕೆ8 ಶ್ರೀಲಂಕಾ ಜಿಂಬಾಬ್ವೆ
ತಾರಕ್ ಕೋಟೇಶ್ವರ್ 20ಕ್ಕೆ8 ನಾನ್‌ದೆಸ್‌ಪ್ಟಸ್ ರಾಗಂ ಸಿಸಿ
ಮೈಕೆಲ್ ಹೋಲ್ಡಿಂಗ್ 21ಕ್ಕೆ8 ಡರ್ಬಿಶೈರ್ ಸಸೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT