ಶನಿವಾರ, ಜೂನ್ 19, 2021
28 °C

ಬಿದಿರಿನ ಬ್ಯಾಟ್ ಬಳಕೆ ನಿಯಮಬಾಹಿರ: ಎಂಸಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಕ್ರಿಕೆಟ್‌ನಲ್ಲಿ ಬಿದಿರಿನಿಂದ ತಯಾರಿಸಿದ ಬ್ಯಾಟ್‌ಗಳನ್ನು ಬಳಸುವುದು ನಿಯಮಬಾಹಿರ ಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತಿಳಿಸಿದೆ.

ಕೆಂಬ್ರಿಜ್ ವಿಶ್ವವಿದ್ಯಾಲಯದ ದರ್ಶಿಲ್ ಶಾ ಮತ್ತು ಬೆನ್ ಟಿಕ್ಲರ್–ಡೆವಿಸ್ ಅವರು ಸಂಶೋನೆ ಮಾಡಿ, ಬಂಬೂ ಬ್ಯಾಟ್‌ಗಳು ಸಾಂಪ್ರದಾಯಿಕ ಬ್ಯಾಟ್‌ಗಳಿಗಿಂತ ಕಡಿಮೆ ಬೆಲೆಯುಳ್ಳವು ಮತ್ತು ಗುಣಮಟ್ಟದಲ್ಲಿ ಉತ್ತಮವಾಗಿರುತ್ತವೆ. ಆದ್ದರಿಂದ ವಿಲ್ಲೊ ಬ್ಯಾಟ್‌ಗಳಿಗಿಂತ ಇದನ್ನೇ ಬಳಸಬಹುದು ಎಂದು ಶಿಫಾರಸು ಮಾಡಿದ್ದರು.

ಓದಿ: 

ಇದಕ್ಕೆ ಪ್ರತಿಕ್ರಿಯಿಸಿರುವ ಎಂಸಿಸಿ, ‘ಕ್ರಿಕೆಟ್‌ ನಿಯಮ 5.3.3ರ ಪ್ರಕಾರ ಕಟ್ಟಿಗೆ ಅಥವಾ ಮರದಿಂದ ತಯಾರಿಸಿದ ಬ್ಯಾಟ್‌ಗಳನ್ನೇ ಬಳಸಬೇಕು. ಬಿದಿರು ಹುಲ್ಲು ಜಾತಿಯದ್ದು. ಆದ್ದರಿಂದ ಅದು ಕಟ್ಟಿಗೆಯಲ್ಲ. ಒಂದೊಮ್ಮೆ ಬಿದಿರು ಬ್ಯಾಟ್‌ ಬಳಸಬೇಕಾದರೆ ನಿಯಮ ತಿದ್ದುಪಡಿ ಅಗತ್ಯವಿದೆ‘ ಎಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು