ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ನಿಂದನೆ: ಸರ್ಫರಾಜ್‌ರನ್ನು ನಾವು ಕ್ಷಮಿಸಿದ್ದೇವೆ –ಡು ಪ್ಲೆಸಿಸ್

Last Updated 25 ಜನವರಿ 2019, 1:46 IST
ಅಕ್ಷರ ಗಾತ್ರ

ಡರ್ಬನ್‌: ‘ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸರ್ಫರಾಜ್‌ ಅಹಮ್ಮದ್‌ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ನಮ್ಮ ತಂಡದ ಪಿಶುವಾಯೊ ಬಳಿ ಕ್ಷಮೆಯಾಚಿಸಿದ್ದಾರೆ. ಆದ್ದರಿಂದ ನಾವು ಅವರನ್ನು ಕ್ಷಮಿಸಿದ್ದೇವೆ’ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್ ತಿಳಿಸಿದ್ದಾರೆ.

ಡರ್ಬನ್‌ನಲ್ಲಿ ಬುಧವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಪಿಶುವಾಯೊ ರನ್‌ ಗಳಿಸುತ್ತಿದ್ದಾಗ ವಿಕೆಟ್ ಕೀಪರ್‌ ಸರ್ಫರಾಜ್‌ ‘ಏ ಕರಿಯ...’ ಎಂದು ನಿಂದಿಸಿದ್ದರು. ಸ್ಟಂಪ್‌ಗೆ ಅಳವಡಿಸಿದ್ದ ಮೈಕ್‌ನಲ್ಲಿ ಅವರ ಅವಹೇಳನಕಾರಿ ಮಾತುಗಳು ದಾಖಲಾಗಿದ್ದವು.

ಸರ್ಫರಾಜ್‌ ಹೇಳಿಕೆಗೆ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಸೇರಿದಂತೆ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಪಾಕ್‌ನ ಹಲವು ಕ್ರಿಕೆಟಿಗರು ವಿಷಾದ ವ್ಯಕ್ತಪಡಿಸಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT