ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್: ಕರ್ನಾಟಕ ತಂಡಕ್ಕೆ ಯರೇಗೌಡ ಮುಖ್ಯ ಕೋಚ್

23 ವರ್ಷದೊಳಗಿವರ ತಂಡಕ್ಕೆ ಶಿರಗುಪ್ಪಿ ಕೋಚ್; ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಅಭಿರಾಮ್
Published : 15 ಆಗಸ್ಟ್ 2024, 16:03 IST
Last Updated : 15 ಆಗಸ್ಟ್ 2024, 16:03 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಸೀನಿಯರ್ ಹಾಗೂ ಜೂನಿಯರ್ ಕ್ರಿಕೆಟ್ ತಂಡಗಳ ತರಬೇತುದಾರರು ಮತ್ತು ಆಯ್ಕೆಗಾರರ ನೇಮಕವನ್ನು ಗುರುವಾರ ಪ್ರಕಟಿಸಿದೆ. 

ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕೆ. ಯರೇಗೌಡ ನೇಮಕವಾಗಿದ್ದಾರೆ. ಕಳೆದ ಋತುವಿನಲ್ಲಿ ಅವರು ರಾಜ್ಯ 23 ವರ್ಷದೊಳಗಿನವರ ತಂಡದ ಕೋಚ್ ಆಗಿದ್ದರು. ಅವರ ಅವಧಿಯಲ್ಲಿ ತಂಡವು ಉತ್ತಮ ಫಲಿತಾಂಶ ಸಾಧನೆ ಮಾಡಿತ್ತು. 

ಯರೇಗೌಡ ಅವರು 2022ರವರೆಗೆ ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿದ್ದರು. ಇದೀಗ ಮತ್ತೆ ಅವರು ತಂಡಕ್ಕೆ ಮರಳಿದ್ದಾರೆ. ಮನ್ಸೂರ್ ಅಲಿ ಖಾನ್ ಬೌಲಿಂಗ್ ಕೋಚ್ ಆಗಿದ್ದಾರೆ. ಶಬರೀಶ್ ಮೋಹನ್ ಫೀಲ್ಡಿಂಗ್ ಕೋಚ್ ಆಗಿದ್ಧಾರೆ. 

23 ವರ್ಷದೊಳಗಿನವರ ತಂಡಕ್ಕೆ ಸೋಮಶೇಖರ್ ಎನ್. ಶಿರಗುಪ್ಪಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಸೀನಿಯರ್ ಮತ್ತು ಜೂನಿಯರ್ ತಂಡಗಳ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಜೆ. ಅಭಿರಾಮ್ ಮುಂದುವರಿದಿದ್ದಾರೆ. 

ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಕರುಣಾ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಮಿತಿಗಳು ಇಂತಿವೆ: ರಾಜ್ಯ ಸೀನಿಯರ್ ಕ್ರಿಕೆಟ್ ತಂಡ: ಕೆ.ಯರೇಗೌಡ (ಮುಖ್ಯ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ ಮೋಹನ್ (ಫೀಲ್ಡಿಂಗ್ ಕೋಚ್)

23 ವರ್ಷದೊಳಗಿನವರು: ಸೋಮಶೇಖರ ಎನ್. ಶಿರಗುಪ್ಪಿ (ಮುಖ್ಯ ಕೋಚ್), ರೋಹಿತ್ ಸಬರವಾಲ್ (ಫೀಲ್ಡಿಂಗ್ ಕೋಚ್)

19 ವರ್ಷದೊಳಗಿನವರು: ಕೆ.ಬಿ. ಪವನ್ (ಮುಖ್ಯ ಕೋಚ್), ಎಸ್‌.ಎಲ್. ಅಕ್ಷಯ್ (ಬೌಲಿಂಗ್ ಕೋಚ್)

16 ಮತ್ತು 14 ವರ್ಷದೊಳಗಿನವರು: ಕುನಾಲ್ ಕಪೂರ್ (ಮುಖ್ಯ ಕೋಚ್), ಆದಿತ್ಯ ಬಿ ಸಾಗರ್ (ಸಹಾಯಕ ಕೋಚ್). 

ಆಯ್ಕೆ ಸಮಿತಿ: ಸೀನಿಯರ್ ತಂಡ: ಜಿ. ಅಭಿರಾಮ್ (ಮುಖ್ಯಸ್ಥ), ಕೆ.ಎಲ್. ಅಶ್ವಥ್, ಸಿ. ರಘು, ಎನ್‌.ಸಿ. ಅಯ್ಯಪ್ಪ (ಆಯ್ಕೆಗಾರರು). 

ಜೂನಿಯರ್ ತಂಡಗಳು: ಜೆ. ಅಭಿರಾಮ್ (ಮುಖ್ಯಸ್ಥ), ಎಂ.ವಿ. ಪ್ರಶಾಂತ್, ಕೆ.ಎಂ. ಅಯ್ಯಪ್ಪ, ಉದಿತ್ ಪಟೆಲ್, ರಘೋತ್ತಮ ನವಲಿ (ಆಯ್ಕೆಗಾರರು)

ಮಹಿಳೆಯರ ವಿಭಾಗ: ಸೀನಿಯರ್ ಮತ್ತು 23 ವರ್ಷದೊಳಗಿನವರು: ಕರುಣಾ ಜೈನ್ (ಮುಖ್ಯ ಕೋಚ್).

19 ವರ್ಷದೊಳಗಿವನರು: ರಕ್ಷಿತಾ ಕೃಷ್ಣಪ್ಪ (ಮುಖ್ಯ ಕೋಚ್)

15 ವರ್ಷದೊಳಗಿನವರು: ರಾಖಿ ಗಂಗಲ್ (ಮುಖ್ಯ ಕೋಚ್)

ಆಯ್ಕೆ ಸಮಿತಿ: ಸೀನಿಯರ್ ಸಮಿತಿ: ಸುನಿತಾ ಅನಂತಕೃಷ್ಣನ್ (ಮುಖ್ಯಸ್ಥರು), ಮುಕ್ತಾ ಆರ್ ಅಳಗೇರಿ, ಅರುಣಾ ರೆಡ್ಡಿ, ಡಾ. ನಿವೇದಿತಾ ರೇಶ್ಮೆ (ಆಯ್ಕೆಗಾರರು.

ಜೂನಿಯರ್ ಸಮಿತಿ: ಶರ್ಮಿಳಾ ಸಿದ್ಧೋಧನನ್ (ಮುಖ್ಯಸ್ಥರು), ರಂಜಿನಿ ಕುಮಾರ್, ಸಬಾ ಸಿದ್ಧಿಕಿ, ಮೀನಾ ಕುಮಾರಿ (ಆಯ್ಕೆಗಾರರು). 

ಜೆ. ಅಭಿರಾಮ್ 
ಜೆ. ಅಭಿರಾಮ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT