ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಈಚೆಗೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿತ್ರನಟಿ ಮತ್ತು ಸರ್ಬಿಯಾ ಮೂಲದ ನತಾಶಾ ಸ್ಟಾಂಕೊವಿಚ್ ಅಪ್ಪ–ಅಮ್ಮನಾಗಲಿದ್ದಾರೆ.

ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹೋದ ಜನವರಿಯಲ್ಲಿ ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲಿಯೇ ಮದುವೆಯಾಗುವುದಾಗಿ ತಿಳಿಸಿದ್ದರು. ಆದರೆ ಕೊರೊನಾ ವೈರಸ್ ಕಾರಣ ಮಾರ್ಚ್ನಲ್ಲಿ ಲಾಕ್ಡೌನ್ ಆರಂಭವಾಗಿದ್ದರಿಂದ ಮದುವೆ ಮುಂದೂಡಿದ್ದರು ಎಂದು ಮೂಲಗಳು ತಿಳಿಸಿವೆ.

ಆದರೆ, ಭಾನುವಾರ ಸಂಜೆ ಹಾರ್ದಿಕ್ ಮತ್ತು ನತಾಶಾ ಅವರು ತಮ್ಮ ಇನ್ಸ್ಟಗ್ರಾಮ್ ನಲ್ಲಿ ಹಾಕಿದ ಸಂದೇಶವು ಸಂಚಲನಕ್ಕೆ ಕಾರಣವಾಯಿತು. ಅವರ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವೇ ಹರಿಯಿತು.

ಇದನ್ನೂ ಓದಿ: ‘ದನ ಕಾಯೋನು’ ನಟಿ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ: ಶುಭ ಕೋರಿದ ಕೊಹ್ಲಿ

‘ನನ್ನ ಮತ್ತು ನತಾಶಾ ಬಾಳಪಯಣವು ಇಲ್ಲಿಯವರೆಗೂ ಅವಿಸ್ಮರಣೀಯವಾಗಿದೆ. ಮುಂದೆ ಇನ್ನೂ ಸೋಗಸಾಗಲಿದೆ. ಹೊಸ ಜೀವವೊಂದನ್ನು ಸ್ವಾಗತಿಸಲು ನಾವಿಬ್ಬರೂ ಉತ್ಸುಕರಾಗಿದ್ದೇವೆ. ಅತ್ಯಂತ ಪುಳಕಿತರಾಗಿದ್ದೇವೆ. ಬಾಳಹಾದಿಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭಾಶಯಗಳು ಇರಲಿ’ ಎಂದು ಹಾರ್ದಿಕ್ ಬರೆದಿದ್ದಾರೆ.

ಮದುವೆ ಶಾಸ್ತ್ರದ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

ಹೋದ ವರ್ಷ ಬೆನ್ನುನೋವಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ 26 ವರ್ಷದ ಹಾರ್ದಿಕ್, ದೀರ್ಘ ಕಾಲದಿಂದ ವಿಶ್ರಾಂತಿಯಲ್ಲಿದ್ದಾರೆ. ಮಾರ್ಚ್ನಲ್ಲಿ ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಅವರು ಮರಳಿ ಕಣಕ್ಕಿಳಿಯಲಿದ್ದರು. 2016ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಬರೋಡಾದ ಹಾರ್ದಿಕ್ 11 ಟೆಸ್ಟ್, 45 ಏಕದಿನ ಮತ್ತು 38 ಟಿ20 ಪಂದ್ಯಗಳನ್ನು ಆಡಿದ್ದಾರೆ. 28 ವರ್ಷದ ನತಾಶಾ ಅವರು ಬಾಲಿವುಡ್ನ ಕೆಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.