ಬುಧವಾರ, ಜುಲೈ 28, 2021
28 °C

ಸ್ಟೀವ್ ವಾ ಕಂಗಳಲ್ಲಿ ಭಾರತದ ಕ್ರಿಕೆಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟೀವ್‌ ವಾ

ಬೆಂಗಳೂರು: ಭಾರತದಲ್ಲಿ ಒಂದು ಧರ್ಮದಂತೆಯೇ ಜನಮಾನಸದಲ್ಲಿ ಬೆರೆತುಹೋಗಿರುವ ಕ್ರಿಕೆಟ್‌ ಆಟವನ್ನು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಸ್ಟೀವ್ ವಾ ಅವರು ತಮ್ಮ ಹೊಸ ಪುಸ್ತಕದಲ್ಲಿ ಸೆರೆಹಿಡಿದಿದ್ದಾರೆ.

’ದ ಸ್ಪಿರಿಟ್ ಆಫ್‌ ಕ್ರಿಕೆಟ್ ಇಂಡಿಯಾ‘ ಪುಸ್ತಕವನ್ನು ಮಂಗಳವಾರ ಮುದ್ರಣಕ್ಕೆ ಕಳಿಸಿರುವುದಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅದರ ಜೊತೆಗೆ ತಮ್ಮ ಸುತ್ತಾಟದ ವಿಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಭಾರತದ ಪ್ರಮುಖ ನಗರಗಳ ಗಲ್ಲಿಗಲ್ಲಿಗಳನ್ನು ಸುತ್ತಿದ್ದಾರೆ. ಬೆರಗುಗಣ್ಣಿನಿಂದ ಇಲ್ಲಿಯ ಕ್ರಿಕೆಟ್‌ ಪ್ರೇಮವನ್ನು ದಾಖಲಿಸಿದ್ದೇನೆ ಎಂದು ಹೆಳಿದ್ದಾರೆ. 

ಗಲ್ಲಿ ಕ್ರಿಕೆಟ್, ಮೂರು ವರ್ಷದ ಹುಡುಗನ ಆಟ, ಅಂಗವಿಕಲರ, ಅಂಧರ, ಬೌದ್ಧ ಭಿಕ್ಕುಗಳ ಮತ್ತು ಮಹಿಳೆಯರ ಕ್ರಿಕೆಟ್‌ ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರೊಂದಿಗೆ ನಡೆದ ಸಂವಾದದ ಕ್ಷಣಗಳನ್ನೂ ದಾಖಲಿಸಿದ್ದಾರೆ. ಒಟ್ಟು 300 ಪುಟಗಳಲ್ಲಿ 200 ವರ್ಣರಂಜಿತ ಚಿತ್ರಗಳು ಇವೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು