ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ 4ರಿಂದ ಚೆನ್ನೈ ತಂಡದ ಅಭ್ಯಾಸ ಸಾಧ್ಯತೆ: ಕಾಶಿ ವಿಶ್ವನಾಥನ್‌

Last Updated 1 ಸೆಪ್ಟೆಂಬರ್ 2020, 14:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸೋಂಕಿಗೆ ತುತ್ತಾಗಿದ್ದ 13 ಮಂದಿ ಹೊರತುಪಡಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಎಲ್ಲ ಸದಸ್ಯರ ಕೋವಿಡ್‌ ಪರೀಕ್ಷಾ ವರದಿ ‘ನೆಗೆಟಿವ್‌‘ ಬಂದಿದೆ ಎಂದು ಆ ಫ್ರ್ಯಾಂಚೈಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಸೆಪ್ಟೆಂಬರ್‌ 4ರಿಂದ ತಂಡದ ಅಭ್ಯಾಸ ಆರಂಭವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

‘ಕೋವಿಡ್‌ಗೆ ತುತ್ತಾಗಿರುವ ವೇಗದ ಬೌಲರ್‌ ದೀಪಕ್‌ ಚಾಹರ್, ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕವಾಡ್‌ ಸೇರಿದಂತೆ ಸೋಂಕಿತ 13 ಸಿಬ್ಬಂದಿಯೂ ಗುಣಮುಖರಾಗಿದ್ದಾರೆ‘ ಎಂದು ವಿಶ್ವನಾಥನ್‌ ಈ ಮೊದಲು ಹೇಳಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ಬದಲಿಸಿದರು.

‘ಸೋಂಕಿತ 13 ಜನರನ್ನು ಹೊರತುಪಡಿಸಿ ಎಲ್ಲ ಆಟಗಾರರು ಹಾಗೂ ಸಿಬ್ಬಂದಿಯ ಕೋವಿಡ್‌ ಫಲಿತಾಂಶ ನೆಗೆಟಿವ್‌ ಬಂದಿದೆ. ಗುರುವಾರ ಪ್ರತಿಯೊಬ್ಬರೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಲಿದ್ದಾರೆ. ಸೆಪ್ಟೆಂಬರ್‌ 4ರಿಂದ ನಾವು ಅಭ್ಯಾಸ ನಡೆಸಲಿದ್ದೇವೆ‘ ಎಂದು ವಿಶ್ವನಾಥನ್‌ ವಿವರಿಸಿದರು.

‘ದೀಪಕ್‌ ಹಾಗೂ ಋತುರಾಜ್ ಅವರು ಇನ್ನೂ ಎರಡು ಬಾರಿ ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಲಿದ್ದು, 14 ದಿನಗಳ ಕ್ವಾರಂಟೈನ್‌ ಮುಗಿಸಿ ಅಭ್ಯಾಸಕ್ಕೆ ಸೇರಿಕೊಳ್ಳಲಿದ್ದಾರೆ‘ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT