ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಪಿಚ್‌: ಪಂದ್ಯ ಸ್ಥಗಿತ

Last Updated 21 ಡಿಸೆಂಬರ್ 2022, 20:45 IST
ಅಕ್ಷರ ಗಾತ್ರ

ನವದೆಹಲಿ: ಕರ್ನೈಲ್ ಸಿಂಗ್ ಕ್ರೀಡಾಂಗಣದ ಪಿಚ್‌ ಅಪಾಯಕಾರಿ ಮತ್ತು ಆಟಕ್ಕೆ ಯೋಗ್ಯವಲ್ಲವೆಂದು ಇಲ್ಲಿ ನಡೆಯುತ್ತಿದ್ದ ರೈಲ್ವೆಸ್ ಹಾಗೂ ಪಂಜಾಬ್ ನಡುವಣ ರಣಜಿ ಪಂದ್ಯವನ್ನು ಬುಧವಾರ ಸ್ಥಗಿತಗೊಳಿಸಲಾಯಿತು.

ಮಂಗಳವಾರ ಪಂದ್ಯ ಆರಂಭವಾಗಿತ್ತು. ಈ ಪಿಚ್‌ನಲ್ಲಿ ಕೇವಲ 103 ಓವರ್‌ಗಳಲ್ಲಿ 24 ವಿಕೆಟ್‌ಗಳು ಪತನವಾಗಿದೆ. ಅದರಲ್ಲಿ 20 ವೇಗದ ಬೌಲರ್‌ಗಳ ಪಾಲಾಗಿವೆ. ಪಂದ್ಯದ ಮೊದಲ ದಿನ ಪಂಜಾಬ್ 162 ರನ್ ಗಳಿಸಿತು. ಅದಕ್ಕುತ್ತರವಾಗಿ ರೈಲ್ವೆಸ್ ತಂಡವು 150 ರನ್‌ಗಳಿಸಲಷ್ಟೇ ಶಕ್ತವಾಯಿತು.

12 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ 18 ರನ್‌ಗಳಿಗೆ 4 ವಿಕಟ್ ಕಳೆದುಕೊಂಡಿತು.

‘ಇದುವರೆಗೂ ಇಂತಹ ಪಿಚ್ ನೋಡಿಯೇ ಇರಲಿಲ್ಲ. ಇಲ್ಲಿ ಚೆಂಡು ಅಪಾಯಕಾರಿ ಮಟ್ಟದಲ್ಲಿ ಬೌನ್ಸ್‌ ಆಗುತ್ತಿದೆ. ಚೆಂಡಿನ ಪುಟಿತವನ್ನು ಅಂದಾಜು ಮಾಡುವುದು ಕಷ್ಟವಾಗುತ್ತಿದೆ. ಒಳ್ಳೆಯ ಪಿಚ್‌ನಲ್ಲಿ ಪಂದ್ಯ ಆಡಲು ನಾವು ಸಿದ್ಧವೆಂದು ತಿಳಿಸಿದ್ದೇವೆ’ ಎಂದು ಪಂಜಾಬ್ ಬ್ಯಾಟರ್ ಅಭಿಷೇಕ್ ಶರ್ಮಾ ಹೇಳಿದ್ದಾರೆ.

ಅಂಪೈರ್‌ಗಳಾದ ಮದನ ಗೋಪಾಲ್ ಕುಪ್ಪುರಾಜ್, ರಾಜೀವ್ ಗೋದರಾ ಮತ್ತು ಮ್ಯಾಚ್‌ ರೆಫರಿ ಯುವರಾಜ್ ಸಿಂಗ್ ಅವರು ಆಟ ಸ್ಥಗಿತಗೊಳಿಸುವ ನಿರ್ಧಾರ
ಕೈಗೊಂಡರು.

ಈ ಪಿಚ್‌ನಲ್ಲಿ ಸಮಸ್ಯೆ ಇದೇ ಮೊದಲಲ್ಲ. 2011ರಲ್ಲಿ ಕಳಪೆ ಪಿಚ್ ಎಂದು ಘೋಷಿಸಲಾಗಿತ್ತು. ಅದಾಗಿ ಒಂದು ವರ್ಷದ ನಂತರ ಸ್ಥಳೀಯ ಕ್ಯುರೇಟರ್‌ಗಳು ಉದ್ದೇಶಪೂರ್ವಕವಾಗಿಯೇ ಕೆಟ್ಟ ಪಿಚ್‌ಗಳನ್ನು ಮಾಡುತ್ತಿದ್ದದ್ದು ಗಮನಕ್ಕೆ ಬಂದಿತ್ತು. ಅದಕ್ಕಾಗಿ ಎರಡು ವರ್ಷ ಇಲ್ಲಿ ಯಾವುದೇ ಪಂದ್ಯ ಆಯೋಜಿಸದಂತೆ ನಿರ್ಬಂಧ ಹೇರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT