ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20: ಇಂಗ್ಲೆಂಡ್‌ಗೆ ಮಲಾನ್ ಆಸರೆ

Last Updated 4 ಸೆಪ್ಟೆಂಬರ್ 2020, 20:20 IST
ಅಕ್ಷರ ಗಾತ್ರ

ಸೌತಾಂಪ್ಟನ್: ಆ್ಯಶ್ಟನ್ ಅಗರ್, ಕೇನ್ ರಿಚರ್ಡ್ಸನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಳಿಗೆ ಆತಿಥೇಯ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಕಂಗೆಟ್ಟರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (44; 29 ಎಸೆತ, 2 ಸಿಕ್ಸರ್, 5 ಬೌಂಡರಿ) ಮತ್ತು ಮೂರನೇ ಕ್ರಮಾಂಕದ ಡೇವಿಡ್ ಮಲಾನ್ (66; 43 ಎ, 3 ಸಿ, 5 ಸಿ) ದಿಟ್ಟ ಆಟವಾಡಿದರು.

ಇವರಿಬ್ಬರ ಉತ್ತಮ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಮಾಡಲು ನಿರ್ಧರಿಸಿತು. ಜೋಸ್ ಬಟ್ಲರ್ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಿದರು. ನಾಲ್ಕನೇ ಓವರ್‌ನಲ್ಲಿ ಜಾನಿ ಬೇಸ್ಟೊ ಔಟಾದ ನಂತರ ಬಟ್ಲರ್ ಮತ್ತು ಮಲಾನ್ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು.

ಆದರೆ ಆ್ಯಶ್ಟನ್ ಅಗರ್ ಎಸೆತದಲ್ಲಿ ಬಟ್ಲರ್ ಔಟಾದ ನಂತರ ಆಸ್ಟ್ರೇಲಿಯಾ ಹಿಡಿತ ಸಾಧಿಸಿತು. ಟಾಮ್ ಬ್ಯಾಂಟನ್, ನಾಯಕ ಏಯಾನ್ ಮಾರ್ಗನ್, ಮೊಯಿನ್ ಅಲಿ ಮತ್ತು ಟಾಮ್ ಕರನ್ ಎರಡಂಕಿ ದಾಟಲಾರದೆ ಮರಳಿದರು. ಡೇವಿಡ್ ಮಲಾನ್ 19ನೇ ಓವರ್‌ ವರೆಗೂ ಕ್ರೀಸ್‌ನಲ್ಲಿದ್ದು ತಂಡದ ಮೊತ್ತ 150 ದಾಟಲು ನೆರವಾದರು. ಎಂಟನೇ ಕ್ರಮಾಂಕದ ಕ್ರಿಸ್ ಜೋರ್ಡನ್ ಎಂಟು ಎಸೆತಗಳಲ್ಲಿ 14 ರನ್ ಗಳಿಸಿ ಮಿಂಚಿದರು.

ಸಂಕ್ತಿಪ್ತ ಸ್ಕೋರು: ಇಂಗ್ಲೆಂಡ್: 20 ಓವರ್‌ಗಳಲ್ಲಿ 7ಕ್ಕೆ 162 (ಜೋಸ್ ಬಟ್ಲರ್ 44, ಡೇವಿಡ್ ಮಲಾನ್ 66, ಕ್ರಿಸ್ ಜೋರ್ಡನ್ ಔಟಾಗದೆ 14; ಆ್ಯಶ್ಟನ್ ಅಗರ್ 32ಕ್ಕೆ2, ಕೇನ್ ರಿಚರ್ಡ್ಸನ್ 13ಕ್ಕೆ2, ಗ್ಲೆನ್ ಮ್ಯಾಕ್ಸ್‌ವೆಲ್ 14ಕ್ಕೆ2). ಆಸ್ಟ್ರೇಲಿಯಾ ಎದುರಿನ ಪಂದ್ಯ; ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT