ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದ ವೇಳೆ ಅನುಚಿತ ವರ್ತನೆಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಮುಕೇಶ್ ಕುಮಾರ್ ಅವರಿಗೆ ಪಂದ್ಯ ಸಂಭಾವನೆಯ ಶೇ 10ರಷ್ಟು ದಂಡ ವಿಧಿಸಲಾಗಿದೆ. ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.

ಶಿಸ್ತುಸಂಹಿತೆಯ 2.2ರ ವಿಧಿಯ ಅಡಿ ಅವರು ಒಂದನೇ ಹಂತದ ತಪ್ಪು ಮಾಡಿದ್ದಾರೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ. ಈ ವಿಧಿಯು, ಆಟಗಾರರು ಕ್ರಿಕೆಟ್ ಪರಿಕರಗಳನ್ನು ಸಿಟ್ಟಿನಿಂದ ನೆಲಕ್ಕೆ ಬಿಸಾಕುವುದು, ಅಥವಾ ಮೈದಾನದ ಸಲಕರಣೆ ಅಥವಾ ಬಟ್ಟೆಬರೆ ಹಾಳುಮಾಡುವುದಕ್ಕೆ ಸಂಬಂಧಿಸಿದೆ.

ಮುಂಬೈ ಇಂಡಿಯನ್ಸ್ 59 ರನ್ಗಳಿಂದ ಪಂದ್ಯ ಗೆದ್ದುಕೊಂಡಿತ್ತು. ‘ಮುಕೇಶ್ ಕುಮಾರ್ ತಪ್ಪು ಒಪ್ಪಿಕೊಂಡಿದ್ದಾರೆ. ಮತ್ತು ಮ್ಯಾಚ್ ರೆಫ್ರಿ ತೀರ್ಮಾನಕ್ಕೆ ತಲೆಬಾಗಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ. ಆದರೆ ಅವರ ತಪ್ಪನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ.

ಮುಕೇಶ್ ಆ ಪಂದ್ಯದಲ್ಲಿ 4 ಓವರುಗಳಲ್ಲಿ 48 ರನ್ ನೀಡಿದ್ದರು. ಅದಲ್ಲೂ ಅವರ ಕೊನೆಯ ಓವರಿನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ನಮನ್ ಧೀರ್ 27 ರನ್ ಚಚ್ಚಿದ್ದರು. ಮುಕೇಶ್ ಮುಖದಲ್ಲಿ ಹತಾಶೆ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.